ಕೋಲ್ಕತ್ತಾ: ದೇಶದ ಮೊತ್ತ ಮೊದಲ ತೃತೀಯ ಲಿಂಗಿ ನ್ಯಾಯಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾದ 29 ವರ್ಷದ ಜೋಯಿತಾ ಮಹಿ ಮಂಡಲ್ ಇದೀಗ ತನ್ನ ಸಮುದಾಯದವರಿಗೆ ಗೌರವ ತಂದುಕೊಡುತ್ತಿದ್ದಾರೆ.
ಜುಲೈ 8ರಂದು ಪಶ್ಚಿಮಬಂಗಾಳದ ದಿನಜ್ಪುರ್ ಜಿಲ್ಲೆಯ ಲೋಕ್ ಅದಾಲತ್ ನ್ಯಾಯಧೀಶೆಯಾಗಿ ಜೋಯಿತಾ ಅಧಿಕಾರ ಸ್ವೀಕಾರ ಮಾಡಿದ್ದರು. ತೃತೀಯ ಲಿಂಗಿಯೊಬ್ಬರು ಗೌರವಾನ್ವಿತ ಹುದ್ದೆ ಏರಿದ ಮಹತ್ವದ ದಿನವದು.
ಹಿಜರಾ ಆಗಿ ವೃತ್ತಿ ಮಾಡುತ್ತಾ, ಕುಣಿದು ಕುಪ್ಪಳಿಸುತ್ತ ಜನರಿಂದ ಹಣ ಸಂಗ್ರಹಿಸುತ್ತಿದ್ದ ಅವರು, ಅದನ್ನೆಲ್ಲ ತೊರೆದು ವಿದ್ಯೆ ಕಲಿತು ತೃತೀಯ ಲಿಂಗಿಗಳ ಸಮಾನತೆ, ಶಿಕ್ಷಣ, ಉದ್ಯೋಗಕ್ಕಾಗಿ ಹೋರಾಡಿದರು. ಸರ್ಕಾರ, ಸ್ಥಳಿಯ ಸಂಸ್ಥೆಗಳ ಸಹಕಾರದೊಂದಿಗೆ ನ್ಯಾಯಧೀಶೆಯಾಗಿ ನೇಮಕವಾದರು.
ಇದೀಗ ಅವರಿಗೆ ಜನರಿಂದ ಗೌರವ ದೊರಕುತ್ತಿದೆ, ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಇದುವರೆಗೆ ನಾಲ್ಕು ಪ್ರಕರಣಗಳಲ್ಲಿ ನ್ಯಾಯಸಮ್ಮತ ತೀರ್ಪನ್ನು ಪ್ರಕಟಿಸಿದ್ದಾರೆ. ತನ್ನ ಸಮುದಾಯದ ಇತರರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆದು ತರುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.