ವಾಷಿಂಗ್ಟನ್: ಭಾರತದ ಶೇ.85ರಷ್ಟು ಮಂದಿಗೆ ತಮ್ಮ ಸರ್ಕಾರದ ಮೇಲೆ ಭರವಸೆ ಇದೆ. ಆದರೆ ವಿಚಿತ್ರವೆಂದರೆ ಬಹುತೇಕ ಭಾರತೀಯರು ಮಿಲಿಟರಿ ಆಡಳಿತದ ಬಗ್ಗೆ ಒಲವು ಹೊಂದಿರುವುದು. ನೂತನ ಪ್ಯೂ ಸರ್ವೇಯಿಂದ ಈ ಅಂಶ ತಿಳಿದು ಬಂದಿದೆ.
‘2012ರಿಂದ ಭಾರತದ ಆರ್ಥಿಕತೆ ಸರಾಸರಿ ಶೇ.6.9ರಷ್ಟು ಏರಿಕೆ ಕಂಡಿದೆ. ಶೇ.85ರಷ್ಟು ಮಂದಿಗೆ ತಮ್ಮ ಕೇಂದ್ರ ಸರ್ಕಾರದ ಮೇಲೆ ಭರವಸೆ ಇದೆ’ ಎಂದು ಪ್ಯೂ ರಿಸರ್ಚ್ ತಿಳಿಸಿದೆ.
7 ದಶಕಗಳಿಂದ ವಿಶ್ವದ ಅತೀದೊಡ್ಡ ಮತ್ತು ಬಲಿಷ್ಠ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತದಲ್ಲಿ ಶೇ.55ರಷ್ಟು ಮಂದಿ ಸರ್ವಾಧಿಕಾರಿಯಾಗಿರುವ ಮಿಲಿಟರಿ ಆಡಳಿತದಲ್ಲಿ ಆಸಕ್ತಿ ಹೊಂದಿದ್ದಾರೆ. ಇದರಲ್ಲಿ ಶೇ.27ರಷ್ಟು ಮಂದಿ ದೃಢ ನಾಯಕತ್ವ ಬಯಸಿದ್ದಾರೆ.
ಆಡಳಿತ ಮತ್ತು ಸರ್ಕಾರದ ಮೇಲಿನ ಭರವಸೆಯನ್ನು ತಿಳಿದುಕೊಳ್ಳುವ ಸಲುವಾಗಿ ಪ್ಯೂ ರಿಸರ್ಚ್ ಜಗತ್ತಿನಾದ್ಯಂತದ ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.