ಭೋಪಾಲ್: ಮಧ್ಯಪ್ರದೇಶವನ್ನು ಜಲ ಪ್ರವಾಸೋದ್ಯಮದ ತಾಣವಾಗಿ ರೂಪಿಸಲಿದ್ದೇವೆ. ನರ್ಮದಾ ನದಿಯ ಹಿನ್ನೀರಿನಲ್ಲಿ ಹೆಚ್ಚು ಹೆಚ್ಚು ಐಸ್ಲ್ಯಾಂಡ್ಗಳನ್ನು ಸ್ಥಾಪನೆ ಮಾಡುತ್ತೇವೆ. ಇದನ್ನು ಮಧ್ಯ ದ್ವೀಪ್ ಎಂದು ಕರೆಯಲಾಗುತ್ತದೆ ಎಂಬುದಾಗಿ ಅಲ್ಲಿನ ಸಿಎಂ ಶಿವರಾಜ್ ಚೌವ್ಹಾಣ್ ಹೇಳಿದ್ದಾರೆ.
ಖಂಡ್ವಾ ಜಿಲ್ಲೆಯ ಇಂದಿರಾ ಸಾಗರ್ ಡ್ಯಾಂನ ಹಿನ್ನೀರಿನ ಹನುವಂತಿಯ ಐಸ್ಲ್ಯಾಂಡ್ನಲ್ಲಿ ಎರಡೂವರೆ ತಿಂಗಳುಗಳ ಕಾಲ ನಡೆಯಲಿರುವ ವಾಟರ್ ಕಾರ್ನಿವಲ್ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ವೇಳೆ ಅವರು ಬೋಟ್ ರೇಸ್ಗೂ ಚಾಲನೆ ನೀಡಿದರು.
ಸಿಂಗಾಪುರಕ್ಕೆ ಭೇಟಿಕೊಟ್ಟ ಬಳಿಕ ಹನುವಂತಿಯ ಐಸ್ಲ್ಯಾಂಡ್ ನಿರ್ಮಾಣ ಮಾಡಿದೆ. ಇದಕ್ಕೆ 8 ವರ್ಷಗಳೇ ಬೇಕಾಯಿತು. ಮುಂದಿನ ಐದು ವರ್ಷದಲ್ಲಿ ಇದು ದೇಶದ ಟಾಪ್ ಟೂರಿಸ್ಟ್ ತಾಣವಾಗಲಿದೆ ಎಂದರು.
ಕೇರಳದಲ್ಲಿ ಕೊಳಚೆ ನೀರಿನಲ್ಲಿ ಹೌಸ್ಬೋಟ್ ಮಾಡಲಾಗಿದೆ. ಆದರೂ ಅಲ್ಲಿ ಜನ ದಿನಗಟ್ಟಲೆ ತಂಗುತ್ತಾರೆ. ಮಧ್ಯಪ್ರದೇಶದಲ್ಲಿ ಶುದ್ಧ ನರ್ಮದೆಯ ನೀರಿನಲ್ಲೇ ಇದನ್ನು ಮಾಡಲಾಗುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.