ಚಂಡೀಗಢ: ಹರಿಯಾಣದ ರೋಹ್ಟಕ್ನ ಅನ್ವಲ್ ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಟಾಯ್ಲೆಟ್ನದ್ದೇ ದೊಡ್ಡ ಸಮಸ್ಯೆಯಾಗಿತ್ತು. ಸಿಬ್ಬಂದಿಗಳ ಕೊರೆತಿಯಿಂದ ನೈರ್ಮಲ್ಯವಿಲ್ಲದೇ ಇಲ್ಲಿ ಟಾಯ್ಲೆಟ್ಗಳು ಗಬ್ಬು ನಾರುತ್ತಿದ್ದವು.
ಆದರೀಗ ಇಲ್ಲಿನ ಸನ್ನಿವೇಶ ಸಂಪೂರ್ಣ ಬದಲಾಗಿದೆ. ಸ್ವಯಂಚಾಲಿತ ಶುಚಿತ್ವ ಮಾಡುವ ಆಧುನಿಕ ಶೌಚಾಲಯಗಳು ತಲೆ ಎತ್ತಿವೆ.
ಐಐಟಿ-ರೋಕ್ರಿಯ ವಿದ್ಯರ್ಥಿಗಳ ಅನುದಾನದ ಮೂಲಕ ನಡೆಯುವ ಸುಕೃತಿ ಸೋಶಲ್ ಫೌಂಡೇಶನ್ ಬರೋಬ್ಬರಿ ರೂ.11 ಲಕ್ಷ ವೆಚ್ಚದಲ್ಲಿ ಇಲ್ಲಿ ಮಾಡರ್ನ್ ಟಾಯ್ಲೆಟ್ ಕಾಂಪ್ಲೆಕ್ಸ್ನ್ನು ನಿರ್ಮಿಸಿವೆ. ಸ್ವತಃ ವಿದ್ಯಾರ್ಥಿಗಳ ಉಸ್ತುವಾರಿಯಲ್ಲೇ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.
ಇದರಿಂದಾಗಿ ಗಬ್ಬನಾರುತ್ತಿದ್ದ 200 ಮಕ್ಕಳುಳ್ಳ ಈ ಶಾಲೆಯ ಟಾಯ್ಲೆಟ್ಗಳು ಇದೀಗ ಸ್ವಯಂ ಆಗಿ ಶುಚಿತ್ವಗೊಳ್ಳುತ್ತಿವೆ. ಇದು ವಿದ್ಯಾರ್ಥಿಗಳಿಗೂ ಖುಷಿ ತಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.