ಹೈದರಾಬಾದ್: ಹಿಂದುಳಿದ ವರ್ಗಗಳ ನವ ವಿವಾಹಿತರಿಗೆ ಹಣಕಾಸು ನೆರವನ್ನು ಒದಗಿಸುವ ವಿನೂತನ ಯೋಜನೆಗೆ ಆಂಧ್ರಪ್ರದೇಶ ಸಂಪುಟ ಅನುಮೋದನೆಯನ್ನು ನೀಡಿದೆ.
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಹೆಸರಲ್ಲಿ ‘ಚಂದ್ರಣ್ಣ ಪೆಲ್ಲಿ ಕನುಕ’ ಎಂಬ ಯೋಜನೆ ಹೊಸ ವರ್ಷದ ಸಂದರ್ಭದಲ್ಲಿ ಆರಂಭವಾಗಲಿದೆ.
ಬಡತನ ರೇಖೆಗಿಂತ ಕೆಗಿರುವ ಅಥವಾ ವೈಟ್ ರೇಶನ್ ಕಾರ್ಡ್ ಹೊಂದಿದ ನವ ವಿವಾಹಿತರಿಗೆ ಮಾತ್ರ ಇದು ಅನ್ವಯವಾಗಲಿದೆ. ರೂ.30 ಸಾವಿರ ಇವರಿಗೆ ಉಡುಗೊರೆಯಾಗಿ ಸಿಗಲಿದೆ. ಮದುಮಗಳ ವಯಸ್ಸು 18, ಮದುಮಗನ ವಯಸ್ಸು 21 ಆಗಿರುವುದು ಕಡ್ಡಾಯ.
ವಾರ್ಷಿಕ 40 ಸಾವಿರ ಮದುವೆಗಳು ನಡೆಯಬಹುದು ಎಂದು ಅಂದಾಜಿಸಲಾಗಿದ್ದು, ರೂ.120 ಕೋಟಿಯನ್ನು ಸರ್ಕಾರ ವ್ಯಯಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.