ನವದೆಹಲಿ: ಕೌಶಲ್ಯ ಭಾರತ ಅಭಿಯಾನವನ್ನು ಉತ್ತೇಜಿಸುವ ಸಲುವಾಗಿ ವಿಶ್ವಬ್ಯಾಂಕ್ ಬೆಂಬಲಿತ ರೂ.6,655ಕೋಟಿ ರೂಪಾಯಿಯ ಎರಡು ಹೊಸ ಯೋಜನೆಗಳಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ.
ಸಂಕಲ್ಪ್(Skills Acquisition and Knowledge Awareness for Livelihood Promotion ) ಮತ್ತು ಸ್ಟ್ರಿವ್ (Skill Strengthening for Industrial Value Enhancement ) ಯೋಜನೆಗಳಿಗೆ ಅನುಮೋದನೆಯನ್ನು ನೀಡಲಾಗಿದೆ.
ಸಂಕಲ್ಪ್ ಯೋಜನೆ ರೂ.4,455 ಕೋಟಿಯದ್ದಾಗಿದ್ದು ಸಂಪೂರ್ಣವಾಗಿ ಕೇಂದ್ರ ಅನುದಾನಿತ ಯೋಜನೆ. ಸ್ಟ್ರಿವ್ ರೂ.2,200 ಕೋಟಿಯ ಯೋಜನೆಯಾಗಿದ್ದು ವಿಶ್ವಬ್ಯಾಂಕ್ ಬೆಂಬಲದೊಂದಿಗೆ ನಡೆಯಲಿದೆ.
ವೃತ್ತಿಪರ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ಮೂಲಕ ಕೌಶಾಲ್ಯಭಿವೃದ್ಧಿಪಡಿಸುವ ಸರ್ಕಾರ ಮಹತ್ವಾಕಾಂಕ್ಷೆಗೆ ಉತ್ತೇಜನ ನೀಡುವ ಯೋಜನೆ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.