ಅಹ್ಮದಬಾದ್: ಭಾರೀ ಕುತೂಹಲ ಕೆರಣಿಸಿರುವ ಗುಜರಾತ್ ವಿಧಾನಸಭಾ ಚುನಾವಣೆ 2017ರ ಡಿಸೆಂಬರ್ನಲ್ಲಿ ಜರುಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜ್ಯೋತಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಸಿದ್ಧತೆಯ ಬಗ್ಗೆ ಪರಿಶೀಲನೆಗಳನ್ನು ನಡೆಸುವ ಸಲುವಾಗಿ ಗುಜರಾತ್ಗೆ ಭೇಟಿ ನೀಡಿದ ಜ್ಯೋತಿ, ಚುನಾವಣೆ ಒಂದು ಹಂತದಲ್ಲಿ ನಡೆಸಬೇಕೇ ಅಥವಾ ಎರಡು ಹಂತದಲ್ಲಿ ನಡೆಸಬೇಕೇ ಎಂಬ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಗುಜರಾತ್ ಚುನಾವಣಾ ಅಧಿಕಾರಿಗಳು ಮಾಡಿಕೊಂಡಿರುವ ಚುನಾವಣಾ ಸಿದ್ಧತೆಯ ಬಗ್ಗೆ ಆಯುಕ್ತರು ತೃಪ್ತಿ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 14ರ ನಂತರ ಚುನಾವಣೆ ನಡೆಸುವಂತೆ ಬಿಜೆಪಿ ಮನವಿ ಮಾಡಿದೆ. ಡಿ.5ರಿಂದ 14ರವರೆಗೆ ಶುಭ ದಿನಗಳು ಇರುವುದರಿಂದ ಮದುವೆ ಸಮಾರಂಭಗಳು ಅಧಿಕ ಪ್ರಮಾಣದಲ್ಲಿ ಜರುಗುತ್ತವೆ. ಹೀಗಾಗೀ ನಂತರ ಚುನಾವಣೆ ನಡೆಸಬೇಕು ಎಂಬುದು ಅದರ ಮನವಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.