ಮೆಲ್ಬೋರ್ನ್: ಕರ್ನಾಟಕದಲ್ಲೇ ಕನ್ನಡದ ಬಗ್ಗೆ ಅಸಡ್ಡೆ ತೋರಿಸಲಾಗುತ್ತದೆ. ಸರ್ಕಾರದ ಆದೇಶದ ಮೇರೆಗೆ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಲಾಗಿದೆಯೇ ವಿನಃ ಕನ್ನಡದ ಮೇಲಿನ ಪ್ರೀತಿ ಅಷ್ಟಕಷ್ಟೆ. ಆದರೆ ದೂರದ ಆಸ್ಟ್ರೇಲಿಯಾದ ಶಾಲೆಯೊಂದು ತನ್ನ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಮುಂದಾಗಿದೆ.
ಮೆಲ್ಬೋರ್ನ್ನ ವಿಕ್ಟೋರಿಯಾ ಸ್ಕೂಲ್ ಆಫ್ ಲಾಂಗ್ವೇಜ್ ಮುಂದಿನ ಶೈಕ್ಷಣಿಕ ವರ್ಷದಿಂದ ತನ್ನ ವಿದ್ಯಾರ್ಥಿಗಳಿಗೆ ಎರಡನೇ ಭಾಷೆಯಾಗಿ ಕನ್ನಡ ಕಲಿಸಲಿದೆ. ಇಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕನ್ನಡಿಗರು ಇರುವುದೇ ಇದಕ್ಕೆ ಕಾರಣ.
ವಿಕ್ಟೋರಿಯಾ ಸ್ಕೂಲ್ ಆಫ್ ಲಾಂಗ್ವೇಜ್ನಲ್ಲಿ 1ರಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ವಿವಿಧ ಭಾಷೆಗಳನ್ನು ಕಲಿಸಿಕೊಡಲಾಗುತ್ತದೆ. ಮೆಲ್ಬೋರ್ನ್ ಕನ್ನಡ ಸಂಘ ಪ್ರಸ್ತಾವಣೆಯನ್ನು ಸಲ್ಲಿಸಿದ ಹಿನ್ನಲೆಯಲ್ಲಿ ಮುಂದಿನ ವರ್ಷದಿಂದ ಅಲ್ಲಿ ಕನ್ನಡವನ್ನೂ ಆಯ್ಕೆಯ ಭಾಷೆಯಾಗಿ ಕಲಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.