ಭೋಪಾಲ್: ವಿಧವಾ ಮರು ವಿವಾಹವನ್ನು ಪ್ರೋತ್ಸಾಹಿಸುವ ಸಲುವಾಗಿ ಮಧ್ಯಪ್ರದೇಶ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಿಧವೆಯನ್ನು ಮದುವೆಯಾದರೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ.
ದೇಶದಲ್ಲೇ ಮೊದಲ ಬಾರಿಗೆ ವಿಧವಾ ವಿವಾಹಕ್ಕೆ ಉತ್ತೇಜನಕೊಡುವ ಮಹತ್ವದ ಯೋಜನೆಯನ್ನು ಮಧ್ಯಪ್ರದೇಶ ಆರಂಭಿಸಿದ್ದು, ಯೋಜನೆ ಜಾರಿಗೆ ಬಂದ ಬಳಿಕ ವಾರ್ಷಿಕ 1 ಸಾವಿರ ವಿಧವಾ ವಿವಾಹಗಳು ನಡೆಯಬಹುದು ಎಂಬ ನಿರೀಕ್ಷೆ ಅಲ್ಲಿನ ಸರ್ಕಾರದ್ದು.
ವಿವಾಹವಾಗಲು ಬಯಸುವ ವಿಧವೆಯ ವಯಸ್ಸು 45 ವರ್ಷಗಳನ್ನು ಮೀರಬಾರದು ಎಂಬ ನಿಯಮವನ್ನು ವಿಧಿಸಲಾಗಿದೆ.
ಜುಲೈನಲ್ಲಿ ಸುಪ್ರೀಂಕೋರ್ಟ್ ವಿಧವಾ ವಿವಾಹ ಪ್ರೋತ್ಸಾಹಿಸುವ ಯೋಜನೆಗಳನ್ನು ತರುವಂತೆ ಕೇಂದ್ರಕ್ಕೆ ತಿಳಿಸಿತ್ತು. ಮಧ್ಯಪ್ರದೇಶ ಈ ಆದೇಶದಿಂದ ಪ್ರೇರಣೆ ಪಡೆದು ಯೋಜನೆಯನ್ನು ತಂದಂತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.