ತಿರುವನಂತಪುರಂ: ದೇಗುಲಗಳ ಉಸ್ತುವಾರಿ ಹೊತ್ತಿರುವ ಕೇರಳ ಸರ್ಕಾರದ ತ್ರಿವಂಕೂರು ದೇವಸ್ವಂ ಮಂಡಳಿ ವಿವಿಧ ದೇಗುಲಗಳಿಗೆ ಒಟ್ಟು 62 ಅರ್ಚಕರನ್ನು ನೇಮಕ ಮಾಡಿದೆ. ಇದರಲ್ಲಿ 6 ದಲಿತರು ಸೇರಿದಂತೆ ಬ್ರಾಹ್ಮಣೇತರ 36 ಅರ್ಚಕರಿದ್ದಾರೆ.
ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಇವರನ್ನು ಆಯ್ಕೆ ಮಾಡಲಾಗಿದೆ.
ತ್ರಿವಂಕೂರು ದೇವಸ್ವಂ ಶೇ.36ರಷ್ಟು ಅರ್ಚಕ ಸ್ಥಾನಗಳನ್ನು ಪರಿಶಿಷ್ಟ ಜಾತಿ, ಜನಾಂಗ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟಿತ್ತು. ಇದೇ ಮೊದಲ ಬಾರಿಗೆ 6 ದಲಿತರನ್ನು ಅರ್ಚಕರನ್ನಾಗಿ ನೇಮಕ ಮಾಡಲಾಗಿದೆ.
ತ್ರಿವಂಕೂರು ದೇವಸ್ವಂ ಮಂಡಳಿ 1949ರಲ್ಲಿ ಸ್ಥಾಪನೆಯಾಗಿದ್ದು, ಕೇರಳದ ಸುಮಾರು 1,248 ದೇಗುಲಗಳು ಇದರ ಅಧೀನದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.