ನವದೆಹಲಿ: ಜಿಎಸ್ಟಿ ಕೌನ್ಸಿಲ್ ನಿರ್ಣಯಗಳ ಬಳಿಕ ಜಿಎಸ್ಟಿ ಮತ್ತಷ್ಟು ಸರಳಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಿಸಿದ್ದಾರೆ.
‘ದೇಶದ ನಾಗರಿಕರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಮತ್ತು ಆರ್ಥಿಕ ಪ್ರಗತಿ ಸಾಧಿಸುವ ನಮ್ಮ ನಿರಂತರ ಪ್ರಯತ್ನದ ಹಾದಿಯಲ್ಲೇ ಜಿಎಸ್ಟಿ ಇದೆ’ ಎಂದು ಟ್ವಿಟರ್ ಮೂಲಕ ಮೋದಿ ಹೇಳಿದ್ದಾರೆ.
ಸಂಯೋಜಿತ ಯೋಜನೆ ತುಂಬಾ ಆಕರ್ಷಕವಾಗಿದ್ದು, ಇತರ ಸುಗಮ ಕ್ರಮಗಳು ಜಿಎಸ್ಟಿಯನ್ನು ಮತ್ತಷ್ಟು ಜನಸ್ನೇಹಿ ಮತ್ತು ಪರಿಣಾಮಕಾರಿಯಾಗಿಸಲಿದೆ ಎಂದಿದ್ದಾರೆ.
ಜೇಟ್ಲಿ ಮತ್ತು ಅವರ ತಂಡಕ್ಕೆ ಈ ವೇಳೆ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.