ಚೆನ್ನೈ: ಸುರಕ್ಷಿತ ಮತ್ತು ನೈರ್ಮಲ್ಯಯುಕ್ತ ಆಹಾರಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೆಎಫ್ಸಿ ಚೆನ್ನೈನ ರಸ್ತೆ ಬದಿ ವ್ಯಾಪಾರಿಗಳಿಗೆ ತರಬೇತಿಯನ್ನು ನೀಡುತ್ತಿದೆ.
ಈ ಮೂಲಕ ತರಬೇತಿ ಕಾರ್ಯವನ್ನು ಆರಂಭಿಸಿದ ಮೊತ್ತ ಮೊದಲ ರೆಸ್ಟೋರೆಂಟ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ಹಂತವಾಗಿ ಕೆಎಫ್ಸಿ 500 ರಸ್ತೆ ಬದಿ ಆಹಾರ ವ್ಯಾಪಾರಿಗಳಿಗೆ 5 ತಿಂಗಳುಗಳ ಕಾಲ ತರಬೇತಿಯನ್ನು ನೀಡಲಿದೆ.
ನೈರ್ಮಲ್ಯ, ಆಹಾರ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಮುಂತಾದುವುಗಳ ಬಗ್ಗೆ ತರಬೇತಿಯನ್ನು ಅದು ನೀಡಲಿದೆ.
ಅಸಂಘಟಿತ ವಲಯದ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಮಹತ್ವದ ಕ್ರಮ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.