ವಿಜಯವಾಡ: ಆಂಧ್ರ ಪ್ರದೇಶದ 1ಲಕ್ಷ ಬಡ ಕುಟುಂಬಗಳ ವಸತಿ ಕನಸು ಕೊನೆಗೂ ನನಸಾಗಿದೆ. ಗಾಂಧಿ ಜಯಂತಿಯಂದೇ ಸಾಮೂಹಿಕ ಗೃಹ ಪ್ರವೇಶ ಮಾಡಿ ಮನೆಗಳನ್ನು ಅಲ್ಲಿನ ಸರ್ಕಾರ ಬಡವರಿಗೆ ನೀಡಿದೆ.
ಕೇಂದ್ರ ಸರ್ಕಾರದ ‘ಎಲ್ಲರಿಗೂ ವಸತಿ’ ಯೋಜನೆಯಡಿ ಅನುದಾನ ಪಡೆದು ಒಟ್ಟು 1.01 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. 13 ಜಿಲ್ಲೆಗಳ ಜನರು ಈ ವಸತಿಗಳನ್ನು ಪಡೆದುಕೊಂಡಿದ್ದಾರೆ.
ವಿಯಜವಾಡದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಾಮೂಹಿಕ ಗೃಹ ಪ್ರವೇಶ ಮಾಡಿ ಮನೆಗಳನ್ನು ಹಸ್ತಾಂತರಿಸಿದ್ದಾರೆ.
‘ಎಲ್ಲರಿಗೂ ವಸತಿ ಯೋಜನೆ’ಯಡಿ 50 ಸಾವಿರ ಕೋಟಿ ವೆಚ್ಚದಲ್ಲಿ 17.4 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಇದೆ. ಇದರಲ್ಲಿ 5.4 ಲಕ್ಷ ಮನೆಗಳು ನಗರ ಭಾಗದಲ್ಲಿ ನಿರ್ಮಾಣವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.