ಟೊರೆಂಟೋ: ಕೆನಡಾದ ಅತೀದೊಡ್ಡ 3 ಪಕ್ಷಗಳಲ್ಲಿ ಒಂದಾದ ನ್ಯೂ ಡೆಮಾಕ್ರಾಟಿಕ್ ಪಕ್ಷದ ನಾಯಕನಾಗಿ ಭಾರತೀಯ ಮೂಲದ ಜಗ್ಮೀತ್ ಸಿಂಗ್ ನೇಮಕವಾಗಿದ್ದಾರೆ. ಈ ಮೂಲಕ ಕೆನಡಾದ ಅತೀದೊಡ್ಡ ರಾಜಕೀಯ ಪಕ್ಷವನ್ನು ಮುನ್ನಡೆಸುತ್ತಿರುವ ಮೊತ್ತ ಮೊದಲ ಭಾರತೀಯ ಸಿಖ್, ಅಲ್ಪಸಂಖ್ಯಾತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
38 ವರ್ಷದ ಜಗ್ಮೀತ್ ವಕೀಲರಾಗಿದ್ದು, ನ್ಯೂ ಡೆಮಾಕ್ರಾಟಿಕ್ ಪಕ್ಷದ ನಾಯಕನ ಸ್ಥಾನಕ್ಕೆ ನಡೆದ ಮತದಾನದಲ್ಲಿ ಇವರು ಭಾನುವಾರ ವಿಜಯಿಯಾಗಿ ಹೊರಹೊಮ್ಮಿದ್ದಾರೆ. 66 ಸಾವಿರ ಮತಗಳ ಪೈಕಿ ಇವರು 35 ಸಾವಿರ ಮತಗಳನ್ನು ಪಡೆದುಕೊಂಡಿದ್ದಾರೆ.
2019ರ ಅಕ್ಟೋಬರ್ನಲ್ಲಿ ಕೆನಡಾದಲ್ಲಿ ಫೆಡರಲ್ ಎಲೆಕ್ಷನ್ ನಡೆಯಲಿದ್ದು, ಅಲ್ಲಿಯವರೆಗೆ ಇವರು ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.