Tuesday, 20th February 2018
×
Home About Us Advertise With s Contact Us

ಬಾಗಲಕೋಟೆಯಲ್ಲಿ ಆರ್‌ಎಸ್‌ಎಸ್ ಪಥಸಂಚಲನ

ಬಾಗಲಕೋಟೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನ ನಡೆಯಿತು.

ನಗರದ ಬಸವೇಶ್ವರ ಮೈದಾನದಿಂದ ಎರಡು ಮಾರ್ಗಗಳಲ್ಲಿ ಸಂಜೆ 4 ಕ್ಕೆ ಆರಂಭಗೊಂಡ ಪಥಸಂಚಲನಕ್ಕೆ ನಗರದ ಜನತೆ ಪುಷ್ಪವೃಷ್ಟಿ ಸ್ವಾಗತ ಕೋರಿದರು. ಪಥಸಂಚಲನ ಎರಡೂ ಮಾರ್ಗಗಳ ಇಕ್ಕೆಲಗಳಲ್ಲಿ ನಿಂತಿದ್ದ ಭಾರಿ ಜನಸ್ತೋಮ ಘೋಷವಾಕ್ಯಗಳೊಂದಿಗೆ ಪಥ ಸಂಚಲನಕ್ಕೆ ಸಾಥ್ ನೀಡಿದರು.

ಎರಡೂ ಮಾರ್ಗಗಳಲ್ಲಿ ಹೋರಟ ಪಥ ಸಂಚಲನ ಬಸವೇಶ್ವರ ವೃತ್ತದಲ್ಲಿ ಒಂದಾಗಿ ಕಾಲೇಜ್ ಮೈದಾನದತ್ತ ಸಾಗುವ ಸಾಗರೋತ್ಸಾಹದ ನೋಟ ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿತ್ತು. ಎರಡೂ ಮಾರ್ಗಗಳಲ್ಲಿಯ ಪಥಸಂಚಲನ ತಂಡ ಬಸವೇಶ್ವರ ವೃತ್ತದಲ್ಲಿ ಒಂದಾಗುತ್ತಲೇ ನಡೆದ ಪುಷ್ಟವೃಷ್ಠಿ ಸನ್ನಿವೇಶ, ಮುಗಿಲು ಮುಟ್ಟಿದ ಘೋಷಣೆಗಳು ರೋಮಾಂಚನ ಸನ್ನಿವೇಶ ನಿರ್ಮಿಸಿದ್ದವು.

ಪಥಸಂಚಲನ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು, ಸಾರ್ವಜನಿಕರು, ಮಹಿಳೆಯರು, ಮಕ್ಕಳು ಪಥಸಂಚಲನ ನೋಡಲು ಬಸವೇಶ್ವರ ವೃತ್ತದ ಬಳಿ ಸೇರಿದ್ದರು. ಜತೆಗೆ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪಥಸಂಚಲನವನ್ನು ಅದ್ಧೂರಿಯಿಂದ ಸ್ವಾಗತಿಸಿದರು. ಪಥ ಸಂಚಲನ ವೀಕ್ಷಣೆಗೆ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ನಾನಾ ಕಡೆಗಳಿಂದ ಅಭಿಮಾನಿಗಳು ಭಾಗವಹಿಸಿದ್ದರು.

ಸಂಸದ ಪಿ.ಸಿ.ಗದ್ದಿಗೌಡರ, ಮೇಲ್ಮನೆ ಸದಸ್ಯ ಎಚ್.ಆರ್. ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಮೇಲ್ಮನೆ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಮುರಗೇಶ ನಿರಾಣಿ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಯಕುಂಪಿ ಇತರರು ಇದ್ದರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top