ವಾಷಿಂಗ್ಟನ್: ಅನಿವಾಸಿ ಭಾರತೀಯರಿಗೆ ನಿಷೇಧಿಸಲ್ಪಟ್ಟ ನೋಟುಗಳನ್ನು ಡೆಪಾಸಿಟ್ ಮಾಡಲು ಎರಡನೇ ಅವಕಾಶ ಕೊಡುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.
ನ್ಯೂಯಾರ್ಕ್ನಲ್ಲಿ ನಡೆದ ಗ್ಲೋಬಲ್ ಆರ್ಗನೈಝೇಶನ್ ಫಾರ್ ಪೀಪಲ್ ಆಫ್ ಇಂಡಿಯಾ ಒರಿಜಿನ್ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದ ಸಂದರ್ಭ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಅನಿವಾಸಿ ಭಾರತೀಯರಿಗೆ ತಮ್ಮ ಬಳಿಯಿದ್ದ ನಿಷೇಧಿಸಲ್ಪಟ್ಟ ಭಾರತೀಯ ನೋಟುಗಳನ್ನು ಡಿಪೋಸಿಟ್ ಮಾಡಲು ಈ ಹಿಂದೆಯೇ ಅವಕಾಶ ನೀಡಲಾಗಿದೆ, ಇದೀಗ ಮತ್ತೊಂದು ಅವಕಾಶವನ್ನು ಸರ್ಕಾರ ನೀಡುವುದಿಲ್ಲ ಎಂದಿದ್ದಾರೆ.
ವಿದೇಶದ ನಾಗರಿಕತೆ ಪಡೆದ ಭಾರತೀಯರಿಗೆ ಈ ಅವಕಾಶ ಅನ್ವಯವಾಗಿರಲಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.