ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ 2022ರ ವೇಳೆಗೆ ನವ ಭಾರತದ ನಿರ್ಮಾಣ ಗುರಿ ಸಾಧನೆಗೆ ಮುಂದಾಗಿರುವ ಬಿಜೆಪಿ, ದೇಶದ ಬಡತನ, ಭಯೋತ್ಪಾದನೆ, ಜಾತಿ ವ್ಯವಸ್ಥೆ, ಕೋಮುವಾದ ಮತ್ತು ಭ್ರಷ್ಟಾಚಾರವನ್ನು ಹೊಡೆದೊಡಿಸುವ ಸಂಕಲ್ಪ ಮಾಡಿದೆ.
ಮುಕ್ತಾಯಗೊಂಡಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜಕೀಯ ನಿರ್ಣಯ ಅಂಗೀಕರಿಸಿರುವ ಬಿಜೆಪಿ, 5 ಪಿಡುಗಗಳನ್ನು ಅದರಲ್ಲೂ ಮುಖ್ಯವಾಗಿ ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ಹೊಡೆದೊಡಿಸುವ ನಿರ್ಣಯಕೈಗೊಂಡಿದೆ.
ನವಭಾರತ ನಿರ್ಮಾಣದ ಸಕಾರಾಕ್ಕಾಗಿ ಆರಂಭಿಸಿರುವ ‘ಸಂಕಲ್ಪ್ ಸೇ ಸಿದ್ದಿ’ ಕಾರ್ಯಕ್ರಮದ ಮೂಲಕ ಪರಿವರ್ತನೆ ತರಲು ಬಯಸುತ್ತಿದೆ. ನಮ್ಮ ಕನಸು ವಾಸ್ತವಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
2022ರ ವೇಳೆಗೆ ಬಡತನವನ್ನು ನಿರ್ಮೂಲನೆಗೊಳಿಸುವುದು, ಎಲ್ಲಾ ನಾಗರಿಕರಿಗೂ ವಸತಿ ನೀಡುವುದು, ಸಮರ್ಪಕ ಆರೋಗ್ಯ ಚಿಕಿತ್ಸೆ, ಶಿಕ್ಷಣ, ಸ್ವಉದ್ಯೋಗ ಅವಕಾಶ ನೀಡುವುದು ನಮ್ಮ ಮುಖ್ಯ ಗುರಿ ಎಂದು ಬಿಜೆಪಿ ಪ್ರತಿಪಾದಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.