ನವದೆಹಲಿ: ಶೀಘ್ರದಲ್ಲೇ ದೆಹಲಿಯ 1.15 ಲಕ್ಷ ಬೀದಿ ದೀಪಗಳನ್ನು ತೆಗೆದು ಅದರ ಜಾಗಕ್ಕೆ ವಿಶ್ವದರ್ಜೆಯ ಎಲ್ಇಡಿ ಫಿಕ್ಚರ್ಗಳನ್ನು ಅಳವಡಿಸಲಾಗುತ್ತಿದೆ, ಸೆ.26ರಿಂದಲೇ ಈ ಕಾರ್ಯವನ್ನು ನಡೆಸಲಾಗುತ್ತದೆ.
ಉತ್ತರ ದೆಹಲಿಯ ಮಹಾನಗರ ಪಾಲಿಕೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಎಲ್ಇಡಿ ಬೀದಿ ದೀಪಗಳು ದೆಹಲಿಗರಿಗೆ ದೀಪಾವಳಿಯ ಉಡುಗೊರೆ ಎಂದು ಬಣ್ಣಿಸಿದೆ.
ಮಹಾನಗರ ಪಾಲಿಕೆಯಡಿ ಬರುವ ಪ್ರದೇಶಗಳಲ್ಲಿ ಒಟ್ಟು 2.05 ಲಕ್ಷ ಬೀದಿ ದೀಪಗಳಿವೆ. ಇದೀಗ 1.15 ಲಕ್ಷ ದೀಪಗಳು ವಿಶ್ವದರ್ಜೆಯ ಎಲ್ಇಡಿ ಲೈಟಿಂಗ್ ಸಿಸ್ಟಮ್ಗೆ ಪರಿವರ್ತನೆಗೊಳ್ಳಲಿವೆ.
ಈ ಕ್ರಮದಿಂದ ಇಂಧನದ ಉಳಿತಾಯವಾಗಲಿದೆ ಮತ್ತು ನಿರ್ವಹಣಾ ವೆಚ್ಚವೂ ತಗ್ಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.