ನವದೆಹಲಿ: ಕಾಶ್ಮೀರದಲ್ಲಿ ಧೀರ್ಘ ಕಾಲ ಉಳಿದುಕೊಂಡ ಉಗ್ರ ಎಂದು ಕರೆಯಲ್ಪಡುತ್ತಿದ್ದ ಅಬ್ದುಲ್ ಖಾಯೂಮ್ ನಜರ್ನನ್ನು ಮಂಗಳವಾರ ಸೇನಾಪಡೆಗಳು ಹತ್ಯೆ ಮಾಡಿವೆ.
ಉತ್ತರಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯ ಸಂದರ್ಭ ನಜರ್ ಹತನಾಗಿದ್ದಾನೆ. ಈತ ಪೊಲೀಸರ ಸೇರಿದಂತೆ ಒಟ್ಟು 25 ಜನರ ಕೊಲೆಗಳಿಗೆ ಕಾರಣೀಕರ್ತನಾಗಿದ್ದ.
ಪಾಕಿಸ್ಥಾನದಿಂದ ಮತ್ತೆ ಕಾಶ್ಮೀರಕ್ಕೆ ಒಳನುಸುಳಲು ಪ್ರಯತ್ನಿಸುತ್ತಿದ್ದ ವೇಳೆ ಈತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ನ ನಿಯಂತ್ರಣವನ್ನು ಪಡೆದುಕೊಳ್ಳಲು ಈತ ಕಣಿವೆಗೆ ಮರಳುವ ಪ್ರಯತ್ನ ನಡೆಸುತ್ತಿದ್ದ ಎನ್ನಲಾಗಿದೆ.
2015ರಲ್ಲಿ ಈತ ಹಿಜ್ಬುಲ್ ಕಮಾಂಡರ್ ಆಗಿದ್ದ, ಆ ವೇಳೆ ಹಲವು ನಾಗರಿಕರ ಕೊಲೆ ನಡೆಸಿದ ಕಾರಣಕ್ಕೆ ಇವನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು. ಹೀಗಾಗಿ ಈತನನ್ನು ಹಿಜ್ಬುಲ್ ಮುಖ್ಯಸ್ಥ ಸಲಾಹುದ್ದೀನ್ ಉಚ್ಚಾಟನೆಗೊಳಿಸಿದ್ದ.
ಬಳಿಕ ನಜರ್ ತನ್ನದೇ ಆದ ಲಷ್ಕರ್ ಇ ಇಸ್ಲಾಂನ್ನು ಸ್ಥಾಪನೆ ಮಾಡಿದ್ದ.
ಈತ ಜಮ್ಮು ಕಾಶ್ಮೀರ ಪೊಲೀಸರಿಗೆ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.