ಇಂಧೋರ್: ಟಾಯ್ಲೆಟ್ ಇದ್ದರೂ ಅದನ್ನು ಬಳಸದೆ ಬಯಲಿನಲ್ಲಿ ಶೌಚ ಮಾಡುತ್ತಿದ್ದ ಕುಟುಂಬಕ್ಕೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಪಂಜಾಯತ್ ರೂ.75 ಸಾವಿರ ದಂಡ ವಿಧಿಸಿದೆ. ಅಲ್ಲದೇ 43 ಕುಟುಂಬಗಳಿಗೆ ಬಯಲು ಶೌಚ ಮಾಡದಂತೆ ನೋಟಿಸ್ ನೀಡಿದೆ.
ಕಳೆದ ತಿಂಗಳಿನಿಂದ ಕುಟುಂಬಕ್ಕೆ ಬಯಲಿನಲ್ಲಿ ಶೌಚ ಮಾಡದಂತೆ ಆದೇಶಿಸಲಾಗಿತ್ತು. ಆದರೆ ಅದಕ್ಕೆ ಅವರು ಕಿವಿಗೊಟ್ಟಿರಲಿಲ್ಲ. ಇದರಿಂದ ಕೆಂಡಾಮಂಡಲವಾಗಿರುವ ಪಂಚಾಯತ್ ಮಧ್ಯಪ್ರದೇಶ ಪಂಚಾಯತ್ ಕಾಯ್ದೆ 1999 ಅನ್ವಯ 75 ಸಾವಿರ ದಂಡ ವಿಧಿಸಿದೆ. ಕುಟುಂಬದಲ್ಲಿ 10 ಸದಸ್ಯರಿದ್ದು, ದಿನಕ್ಕೆ ತಲಾ 250 ರೂಪಾಯಿಯಂತೆ 30 ದಿನಗಳಿಗೆ ದಂಡ ವಿಧಿಸಲಾಗಿದೆ.
ಮನೆಯಲ್ಲಿ ಟಾಯ್ಲೆಟ್ ನಿರ್ಮಿಸಿಕೊಟ್ಟಿದ್ದರೂ ಇವರು ಅದನ್ನು ಬಳಸದ ಹಿನ್ನಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ಪಂಚಾಯತ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.