ನವದೆಹಲಿ: ರೈಲ್ವೇಯ ‘ಸಂರಕ್ಷ ಶ್ರೇಣಿ’ (ಸೇಫ್ಟಿ ಕೆಟಗರಿ)ಗೆ 1 ಲಕ್ಷ ಜನರನ್ನು ನೇಮಕಾತಿ ಮಾಡಿಕೊಳ್ಳಲು ಸಚಿವ ಪಿಯೂಶ್ ಗೋಯಲ್ ಮುಂದಾಗಿದ್ದಾರೆ.
ಸುದೀರ್ಘ ಸಮಯದಿಂದ ಈ ಹುದ್ದೆಗಳನ್ನು ಖಾಲಿ ಇಡಲಾಗಿತ್ತು. ಆದರೆ ಕೆಲವೊಂದು ರೈಲು ಅವಘಡಗಳು ಸಂಭವಿಸಿದ ಹಿನ್ನಲೆಯಲ್ಲಿ ತಂತ್ರಜ್ಞಾನ ಮತ್ತು ಪರಿಕರಗಳನ್ನು ಹೊರತುಪಡಿಸಿಯೂ ಮಾನವ ಪಡೆ ಅಗತ್ಯವಿದೆ ಎಂದು ರೈಲ್ವೇ ಸಚಿವಾಲಯಕ್ಕೆ ಮನವರಿಕೆಯಾಗಿದೆ.
ಇದೀಗ ಸಚಿವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, 1 ಲಕ್ಷ ಜನರನ್ನು ಸೇಫ್ಟಿ ಕೆಟಗರಿಗೆ ಭರ್ತಿ ಮಾಡಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ ಹಿರಿಯ ಮತ್ತು ಕಿರಿಯ ಎಂಜಿನಿಯರ್ಗಳನ್ನು ಭರ್ತಿ ಮಾಡಲಾಗುತ್ತಿದೆ. ಸ್ಟೇಶನ್ ಮಾಸ್ಟರ್ ಹಾಗೂ ಗಾರ್ಡ್ಸ್ಗಳನ್ನೂ ನೇಮಕ ಮಾಡಿಕೊಳ್ಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.