ಗ್ವಾಲಿಯರ್: ಬಯಲುಶೌಚವನ್ನು ತೊಲಗಿಸುವ ಸಲುವಾಗಿ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲಾಡಳಿತ ವಿನೂತನ ಕಾರ್ಯಕ್ರಮವೊಂದನ್ನು ಆರಂಭಿಸಿದೆ. ಇದರಡಿ ಬಯಲುಶೌಚ ಮಾಡುತ್ತಿರುವವರ ಫೋಟೋ ಕ್ಲಿಕ್ಕಿಸಿ ಕಳುಹಿಸಿಕೊಡುವವರಿಗೆ ರೂ.100 ಬಹುಮಾನ ನೀಡಲಾಗುತ್ತದೆ.
ಬಯಲುಶೌಚ ತಡೆಗೆ ಜಿಲ್ಲಾಡಳಿತ ಹಮ್ಮಿಕೊಂಡ ಕಾರ್ಯಕ್ರಮ ಇದಕ್ಕಾಗಿದ್ದು, ಬಯಲಿನ ಶೌಚ ಮಾಡುವವರ ಫೋಟೋವನ್ನು ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟವರಿಗೆ 100 ರೂ ಸಿಗುತ್ತದೆ.
ಜನರನ್ನು ಸ್ವಚ್ಛತಾ ಪರಿಶೀಲನಾ ಕಾರ್ಯದಲ್ಲಿ ತೊಡಗಿಸುವ ಸಲುವಾಗಿ ಕೈಗೊಂಡ ಸಿಟಿಜನ್ ಕ್ಯಾಂಪೇನ್ ಇದೆಂದು ಗ್ವಾಲಿಯರ್ ಜಿಲ್ಲಾಡಳಿತ ಹೇಳಿದೆ.
ಈ ಮಾರ್ಚ್ನಲ್ಲಿ ಗ್ವಾಲಿಯರ್ನ್ನು ಬಯಲು ಶೌಚಮುಕ್ತವೆಂದು ಘೋಷಣೆ ಮಾಡಲಾಗಿದೆ, ಆದರೂ ಕೆಲವರು ಬಯಲಿನಲ್ಲಿ ಶೌಚ ಮಾಡುತ್ತಿದ್ದಾರೆಂಬ ಆರೋಪವಿದೆ. ಹೀಗಾಗೀ ಇದನ್ನು ಸಾಬೀತುಪಡಿಸಲು ಫೋಟೋವನ್ನು ಬಳಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.