ಮುಂಬಯಿ: ಮುಂಬಯಿಯಿಂದ ಗೋವಾಗೆ ಸಂಚರಿಸುವ ಜನಪ್ರಿಯ ಜನ್ಶತಾಬ್ದಿ ರೈಲು ಶನಿವಾರ ಗ್ಲಾಸ್-ರೂಫ್ ವಿಸ್ಟಡೋಮ್ ಕೋಚ್ನ್ನು ಹೊಂದಲಿದೆ. ಮಾತ್ರವಲ್ಲ ರೋಟೇಟ್ ಆಗುವ ಕುರ್ಚಿ ಮತ್ತು ಮನೋರಂಜನೆಗಾಗಿ ನೇತಾಡುವ ಎಲ್ಸಿಡಿಯನ್ನು ಹೊಂದಲಿದೆ.
ದಾದರ್-ಮಡಗಾಂವ್ ರೂಟ್ನಲ್ಲಿ ಕೊನೆಯ ಕೋಚ್ನಲ್ಲಿ ಈ ಸೇವೆ ಲಭ್ಯವಾಗಲಿದೆ. ಪ್ರಯಾಣಿಕರಿಗೆ ವಿಶೇಷ ಕೇಟರಿಂಗ್ ಸೇವೆಯೂ ಸಿಗಲಿದೆ.
ಕೊಂಕಣ ರೈಲ್ವೇ ಮಾರ್ಗದಲ್ಲಿ ಅತ್ಯದ್ಭುತವಾದ ತಾಣಗಳು ಕಾಣಲು ಸಿಗುತ್ತದೆ. ಇದನ್ನು ಪ್ರಯಾಣಿಕರು ಅಸ್ವಾಧಿಸಲಿ ಎಂಬ ಕಾರಣಕ್ಕೆ ಈ ಗ್ಲಾಸ್ ರೂಫ್ ವಿಸ್ಟಡೋಮ್ನ್ನು ಅಳವಡಿಸಲಾಗಿದೆ.
ರೂಫ್ ಟಾಪ್ನಿಂದ ಹಿಡಿದು ಎಲ್ಲಾ ಕಡೆಯಿಂದಲೂ ಪ್ರಯಾಣಿಕರು ಹೊರಗಿನ ದೃಶ್ಯವನ್ನು ನೋಡಬಹುದು. ಇದು ಸಂಪೂರ್ಣ ರಿಮೋಟ್ ಕಂಟ್ರೋಲ್ಡ್ ಆಗಿದೆ. ದಾದರ್-ಮಡಗಾಂವ್ ರಸ್ತೆಯಲ್ಲಿ ಇದು ಯಶಸ್ವಿಯಾದರೆ ಉಳಿದ ಕಡೆಗೂ ಇದನ್ನು ವಿಸ್ತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.