×
Home About Us Advertise With s Contact Us

ಬೆಳ್ತಂಗಡಿ : ಇತ್ತಂಡಗಳ ನಡುವೆ ಹಲ್ಲೆ ಠಾಣೆಯಲ್ಲಿ ಪ್ರಕರಣ ದಾಖಲು

Belthangady NEWSಬೆಳ್ತಂಗಡಿ : ಉಜಿರೆ ಪೇಟೆಯಲ್ಲಿ ಶುಕ್ರವಾರ ರಾತ್ರಿ ವೇಳೆ ಮಹೇಶ್ ಶೆಟ್ಟಿಯ ಮೇಲೆ ವಾಹನವನ್ನು ನುಗ್ಗಿಸಲು ಪ್ರಯತ್ನಿಸಿದ ಡಾ| ಶ್ರೀನಾಥ್ ಪ್ರಭು ಮೇಲೆ ಮಹೇಶ್ ಬೆಂಬಲಿಗರು ಹಲ್ಲೆ ನಡೆಸಿದ್ದು ಇತ್ತಂಡಗಳ ನಡುವೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹೇಶ್ ಶೆಟ್ಟಿ ತಿಮರೋಡಿ ನೀಡಿದ ದೂರಿನಲ್ಲಿ ಉಜಿರೆಯ ಮೆಡಿಕಲ್‌ವೊಂದರ ಎದುರು ನನ್ನ ವಾಹನ ಪಕ್ಕದಲ್ಲಿದ್ದ ಕಾರಿನಲ್ಲಿದ್ದ ಡಾ| ಶ್ರೀನಾಥ್ ಅವರು ಆಂಗ್ಲ ಭಾಷೆಯಲ್ಲಿ ಅವ್ಯಾಚ ಶಬ್ದದಿಂದ ಬೈಯ್ದು ವಾಹನವನ್ನು ಹಿಮ್ಮುಖವಾಗಿ ಚಲಿಸಿ, ನಂತರ ವೇಗವಾಗಿ ನನ್ನನ್ನು ಹಾಗೂ ಪ್ರಜ್ವಲ್‌ನನ್ನು ವಾಹನದ ಅಡಿಗೆ ಸಿಲುಕಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ಘಟನೆಯಿಂದ ನನ್ನ ವಾಹನ ಚಾಲಕ ಪ್ರೀತಂ ಶೆಟ್ಟಿ ಅವರ ಕೈಗೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.

ಅದೇ ರೀತಿ ಡಾ| ಶ್ರೀನಾಥ್ ಪ್ರಭು ನೀಡಿದ ದೂರಿನಲ್ಲಿ ಉಜಿರೆಯಲ್ಲಿ ತನ್ನ ಮನೆಗೆ ಹೋಗಲು ವಾಹನವನ್ನು ಚಲಾಯಿಸುತ್ತಿದ್ದಂತೆ ಮಹೇಶ್ ಶೆಟ್ಟಿ, ಪ್ರಜ್ವಲ್, ಮನೋಜ್ ಹಾಗೂ ಇತರ ೭ ಮಂದಿ ತಂಡ ಸೇರಿಕೊಂಡು ವಾಹನವನ್ನು ಚಲಾಯಿಸಿದಂತೆ ವಾಹನಗಳನ್ನು ಅಡ್ಡ ಇಟ್ಟು ವಾಟ್ಸಪ್‌ನಲ್ಲಿ ನನ್ನ ಬಗ್ಗೆ ಬಾರಿ ಬರೆಯುತ್ತಿಯಾ ಎಂದು ಬೆದರಿಕೆ ಹಾಕಿ ವಾಹನದಿಂದ ಹೊರಗೆಳೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾಗಿ ಆರೋಪಿಸಿದ್ದಾರೆ.

ಬೆಳ್ತಂಗಡಿ ಪೋಲಿಸರು ಎರಡು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top
error: Content is protected !!