ನವದೆಹಲಿ: ರಾಜ್ಯಸಭಾದ ಮುಖ್ಯಸ್ಥರಾಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಜ್ಯಸಭಾ ಟಿವಿಯ ಖರ್ಚುವೆಚ್ಚ ಮತ್ತು ವೃತ್ತಿಪರ ಆಡಿಟ್ ನಡೆಸುವಂತೆ ಆದೇಶ ನೀಡಿದ್ದಾರೆ.
ರಾಜ್ಯಸಭಾ ಟಿವಿಯು ವಾರ್ಷಿಕ 60 ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತದೆ ಎಂಬ ವರದಿಗಳ ಹಿನ್ನಲೆಯಲ್ಲಿ ಈ ಆದೇಶವನ್ನು ಅವರು ನೀಡಿದ್ದಾರೆ.
ಆಫೀಸ್ ಆವರಣದ ಬಾಡಿಗೆ, ಕ್ಯಾಬ್ಗಳ ಬಾಡಿಗೆ, ಫೀಚರ್ ಫಿಲ್ಮ್ ತಯಾರಿಕೆಗೆ ರಾಜ್ಯಸಭಾ ಟಿವಿ ಹಣಗಳನ್ನು ವ್ಯಯಿಸುತ್ತಿದೆ. 2011ರ ಆಗಸ್ಟ್ನಲ್ಲಿ ಚಾನೆಲ್ ಆರಂಭವಾಗಿನಿಂದ ಇದುವರೆಗೆ ಒಟ್ಟು 375 ಕೋಟಿ ರೂಪಾಯಿಗಳನ್ನು ವ್ಯಯ ಮಾಡಿದೆ.
ರಾಜ್ಯಸಭಾ ಮುಖ್ಯಸ್ಥರಿಗೆ ಒದಗಿಸಲಾದ ಅಂಕಿಅಂಶಗಳ ಪ್ರಕಾರ ಚಾನೆಲ್ ವಾರ್ಷಿಕ 25 ಕೋಟಿ ರೂಪಾಯಿಗಳನ್ನು ಜಾಗದ ಬಾಡಿಗೆಯಾಗಿ ನೀಡುತ್ತಿದೆ. ರಾಗ್ದೇಶ್ ಚಿತ್ರ ತಯಾರಿಕೆಗೆ ಇದು 12.5 ಕೋಟಿ ವ್ಯಯಿಸಿದೆ ಎನ್ನಲಾಗಿದೆ.
ಇದು ನಾಯ್ಡು ಅವರ ಕೆಂಗಣ್ಣಿಗೆ ಕಾರಣವಾಗಿದ್ದು, ಚಾನೆಲ್ನ ಎಲ್ಲಾ ಖರ್ಚುವೆಚ್ಚಗಳ ಆಡಿಟ್ಗೆ ಆದೇಶಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.