ನಾಗ್ಪುರ: ಕೇವಲ 21ರ ವಯಸ್ಸಿನಲ್ಲಿ ಬ್ಯುಸಿನೆಸ್ ಕಮ್ಯೂನಿಕೇಶನ್ ವಿಷಯದಲ್ಲಿ ಪಿಎಚ್ಡಿ ಪದವಿ ಪಡೆದುಕೊಂಡಿರುವ ನಾಗ್ಪುರದ ನಿಖಿಲ್ ಚಂದವಾನಿ ಅವರು ಇದೀಗ ಗಿನ್ನಿಸ್ ದಾಖಲೆಯ ಪುಟ ಸೇರಿದ್ದಾರೆ.
ಬರವಣಿಗೆಯಲ್ಲಿ ಅತೀವ ಆಸಕ್ತಿಯಿರುವ ನಿಖಿಲ್ ಅವರಿಗೆ ತಮ್ಮ ಬರವಣಿಗೆಯೇ ಪಿಎಚ್ಡಿ ಮಾಡಲು ಸಹಾಯಕವಾಯಿತು. ಇತ್ತೀಚಿಗೆ ಅವರು ಪದ್ಮಶ್ರೀ ಪ್ರಶಸ್ತಿಗೂ ಜನರಿಂದ ನಾಮನಿರ್ದೇಶನಗೊಂಡಿದ್ದರು.
ಬರವಣಿಗೆ, ಪೇಯಿಟಿಂಗ್ ಮುಂತಾದ ಸೃಜನಾತ್ಮಕ ಕ್ಷೇತ್ರದಲ್ಲಿ ಒಂದು ಮಿಲಿಯನ್ ಜನರಿಗೆ ತರಬೇತಿ ನೀಡುವ ಗುರಿ ಹೊಂದಿರುವ ನಿಖಿಲ್, ಸೃಜನಶೀಲತೆಯಿದ್ದರೆ ಒಂಟಿತನ, ಡಿಪ್ರೆಶನ್ಗಳಿಂದ ದೂರವಾಗಬಹುದು ಎನ್ನುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.