ಮುಂಬಯಿ: ಮಹಾರಾಷ್ಟ್ರದ ಹೀರೋ, ಹುತಾತ್ಮ ಕೊ.ಸಂತೋಷ್ ಮಹದಿಕ್ ಅವರ ಪತ್ನಿ ಸ್ವಾತಿ ಮಹದಿಕ್ ಅವರು ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ.
ಸ್ವಾತಿ ಅವರು ಚೆನ್ನೈನಲ್ಲಿ ಶನಿವಾರ ಪೆರೇಡ್ನ್ನು ಪೂರ್ಣಗೊಳಿಸಿ ಲೆಫ್ಟಿನೆಂಟ್ ಹುದ್ದೆಗೇರಿದರು. ಈ ವೇಳೆ ಅವರ ಮಗಳು ಕಾರ್ತಿಕಿ, ಮಗ ಸ್ವರಾಜ್, ಅತ್ತೆ ಕಲಿಂದಿ ಗೊರ್ಪಡೆ, ಆಕೆಯ ತಂದೆ ಬಬನ್ರಾವ್ ಶೆಡ್ಗೆ ಮತ್ತು ತಾಯಿ ಉಪಸ್ಥಿತರಿದ್ದರು.
ಕೋ.ಸಂತೊಷ್ ಮಹದಿಕ್ ಅವರು 41 ರಾಷ್ಟ್ರೀಯ ರೈಫಲ್ನ ಕಮಿಷನಿಂಗ್ ಆಫೀಸರ್ ಆಗಿದ್ದರು. 2015ರ ನವೆಂಬರ್ನಲ್ಲಿ ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ನಡೆದ ಉಗ್ರರೊಂದಿಗಿನ ಹೋರಾಟದಲ್ಲಿ ಇವರು ಅಸುನೀಗಿದ್ದರು. ಇವರಿಗೆ ಮರಣೊತ್ತದ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇದೀಗ ಅವರ ಪತ್ನಿ ಸ್ವಾತಿ ಅವರು ಪತಿಯ ಹಾದಿಯಲ್ಲೇ ಸಾಗಿ ಸೇನೆಗೆ ಸೇರ್ಪಡೆಯಾಗಿದ್ದಾರೆ. ಸೇನೆಯು ಅವರಿಗೆ ಸೇನೆಗೆ ಸೇರುವ ವಯಸ್ಸಿನ ಮಿತಿಯಿಂದ ವಿನಾಯಿತಿಯನ್ನೂ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.