ನವದೆಹಲಿ: ರೈಲ್ವೇ ಹಳಿಗಳನ್ನು ಪರಿಶೀಲಿಸಲು ಬಳಸುವ ಹ್ಯಾಂಡ್ ಪುಶ್ ಟ್ರಾಲಿಗಳಲ್ಲಿ ಜಿಪಿಎಸ್ ಟ್ರ್ಯಾಕರ್ಸ್ಗಳನ್ನು ಬಳಸಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ.
ಈ ಬಗ್ಗೆ ಸೆ.6ರಂದು ರೈಲ್ವೇ ಮಂಡಳಿ ಎಲ್ಲಾ ರೈಲ್ವೇ ವಲಯಗಳಿಗೂ ಪತ್ರ ಬರೆದಿದ್ದು, ತಿಂಗಳೊಳಗೆ ಟ್ರಾಲಿಗಳಲ್ಲಿ ಜಿಪಿಎಸ್ ಅಳವಡಿಸುವಂತೆ ಸೂಚನೆ ನೀಡಿದೆ.
ಟ್ರ್ಯಾಕ್ಗಳ ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಶೀಲನೆಗಾಗಿ ಟ್ರಾಲಿಗಳಲ್ಲಿ ಸಂಖ್ಯೆ ಮತ್ತು ಜಿಪಿಎಸ್ ಅಳವಡಿಸಬೇಕು. ಒಂದು ತಿಂಗಳೊಳಗೆ ಜಿಪಿಎಸ್ ಅಳವಡಿಕೆ ಕಾರ್ಯ ಮುಕ್ತಾಯವಾಗಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹಲವಾರು ರೈಲುಗಳು ಹಳಿ ತಪ್ಪಿ ದುರಂತ ಸಂಭವಿಸಿದ ಘಟನೆಗಳು ನಡೆದ ಹಿನ್ನಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.