ವಾಷಿಂಗ್ಟನ್: ಅಮೆರಿಕಾ ಭಾರತಕ್ಕೆ ತನ್ನ ರಾಯಭಾರಿಯಾಗಿ ಕೆನ್ನೆತ್ ಐ ಜಸ್ಟರ್ ಅವರನ್ನು ನೇಮಕ ಮಾಡಿದ್ದು, ಈ ಬಗ್ಗೆ ಶನಿವಾರ ಘೋಷನೆ ಹೊರಡಿಸಿದೆ.
ಜೂನ್ ತಿಂಗಳಲ್ಲೇ ವೈಟ್ಹೌಸ್ 62 ವರ್ಷದ ಜಸ್ಟರ್ ತಮ್ಮ ಮುಂದಿನ ಭಾರತ ರಾಯಭಾರಿ ಎಂದು ಹೇಳಿತ್ತು.
ಜಸ್ಟರ್ ಅವರು ಎಕನಾಮಿಕ್ ಪಾಲಿಸಿ ಮೇಕರ್ ಆಗಿದ್ದು, ಭಾರತದ ವಿಷಯಗಳ ಬಗ್ಗೆ ತಜ್ಞತೆಯನ್ನೂ ಹೊಂದಿದ್ದಾರೆ.
ಇವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗಳ ಡೆಪ್ಯೂಟಿ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೇ ಟ್ರಂಪ್ ಅವರ ನ್ಯಾಷನಲ್ ಎಕನಾಮಿಕ್ ಕೌನ್ಸಿಲ್ನ ಡೆಪ್ಯೂಟಿ ಡೈರೆಕ್ಟರ್ ಕೂಡ ಆಗಿದ್ದಾರೆ.
ಸದ್ಯ ಭಾರತದಲ್ಲಿ ಅಮೆರಿಕಾ ರಾಯಭಾರಿಯಾಗಿರುವ ರಿಚರ್ಡ್ ವರ್ಮಾ ಅವರ ಜಾಗವನ್ನು ಇವರು ಅಲಂಕರಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.