ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭಾರತ ಸರ್ಕಾರದ ಸುಮಾರು 80 ಹೆಚ್ಚುವರಿ ಕಾಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಗಳೊಂದಿಗೆ ಸಂವಾದ ನಡೆಸಿದರು. ಇದು ಇವರ ಇಂತಹ 4ನೇ ಸಂವಾದವಾಗಿದೆ.
ಈ ವೇಳೆ ಕಾರ್ಯದರ್ಶಿಗಳು ಇನ್ನೋವೇಶನ್, ಆಡಳಿತದಲ್ಲಿ ಟೀಂ ವರ್ಕ್, ಆರೋಗ್ಯ, ಆರೋಗ್ಯ ಶಿಕ್ಷಣ, ಕೃಷಿ, ಜಲ ಸಂಪತ್ತು, ಇ-ಆಡಳಿತ, ತೆರಿಗೆ ಆಡಳಿತ, ಜಿಎಸ್ಟಿ, ಉದ್ಯಮ, ಕುಂದು ಕೊರತೆ ಆಲಿಕೆ, ಮಕ್ಕಳ ಹಕ್ಕು ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ತಮ್ಮ ಅನುಭವವನ್ನು ಮೋದಿಯೊಂದಿಗೆ ಹಂಚಿಕೊಂಡರು.
ಪ್ರಧಾನಿಯವರೂ ಆಡಳಿತದ ಪ್ರಕ್ರಿಯೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯ ಮಾಡುವಂತೆ ಕಾರ್ಯದರ್ಶಿಗಳಿಗೆ ಕರೆ ನೀಡಿದರು.
2022ರ ವೇಳೆಗೆ ನವ ಭಾರತವನ್ನು ಸೃಷ್ಟಿಸುವತ್ತ ಗುರಿಯಿಟ್ಟು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.