ಅಹ್ಮದಾಬಾದ್: ಡೋಕ್ಲಾಂನಿಂದ ಭಾರತ ಮತ್ತು ಚೀನಾ ಸೇನೆಯನ್ನು ಹಿಂಪಡೆಯಲು ನಿರ್ಧರಿಸಿರುವುದನ್ನು ಸ್ವಾಗತಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್, ಉಭಯ ದೇಶಗಳ ನಡುವೆ ಮೂಡಿದ ಒಮ್ಮತ ಭಾರತಕ್ಕೆ ದೊರೆತ ಜಯವಾಗಿದೆ ಎಂದು ಬಣ್ಣಿಸಿದ್ದಾರೆ.
ಉಭಯ ದೇಶಗಳ ನಡುವೆ ಮೂಡಿದ ಒಮ್ಮತ ಭಾರತದ ಗೆಲುವು ಎಂದಿರುವ ಅವರು, ಎಲ್ಲಾ ಪಕ್ಷಗಳು ಈ ಬೆಳವಣಿಗಯನ್ನು ಸ್ವಾಗತಿಸಿವೆ. ಇದು ಭಾರತಕ್ಕೆ ದೊರೆತ ಅತೀದೊಡ್ಡ ಯಶಸ್ಸು ಎಂದಿದ್ದಾರೆ.
ಡೋಕ್ಲಾಂನಿಂದ ಉಭಯ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿವೆ. ಇದು ಭಾರತಕ್ಕೆ ಸಿಕ್ಕ ಅತೀದೊಡ್ಡ ರಾಜತಾಂತ್ರಿಕ ಗೆಲುವು ಎಂದು ಬಣ್ಣಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.