ಹೈದರಾಬಾದ್: ಹೈದರಾಬಾದ್ನಲ್ಲಿ ಶುದ್ಧ ಕುಡಿಯುವ ಮತ್ತು ಖನಿಜಾಂಶಯುಕ್ತ ನೀರನ್ನು ಸಾರ್ವಜನಿಕರಿಗೆ ಒಗಿಸುವಂತಹ ಎಟಿಎಂ ಸ್ಥಾಪನೆಯಾಗಿದೆ. ಶುದ್ಧ ನೀರಿನ ಲಭ್ಯತೆ ಇಲ್ಲದವರಿಗೆ ಈ ಎಟಿಎಂ ವರದಾನವಾಗಿದೆ.
ಹೈದರಾಬಾದ್ನ ಎನ್ಟಿಆರ್ ಗಾರ್ಡನ್ ಸಮೀಪ ಎಟಿಎಂ ಸ್ಥಾಪನೆಯಾಗಿದ್ದು, ಅಲ್ಲಿನ ಮೇಯರ್ ಬಿ.ರಾಮ್ಮೋಹನ್ ಇದನ್ನು ಲೋಕಾರ್ಪಣೆಗೊಳಿಸಿದರು.
ಈ ಎಟಿಎಂನಲ್ಲಿ 1 ರೂಪಾಯಿಗೆ 1 ಗ್ಲಾಸ್, 2 ರೂಪಾಯಿಗೆ 1 ಲೀಟರ್, 5 ರೂಪಾಯಿಗೆ 10 ಲೀಟರ್, 10 ರೂಪಾಯಿಗೆ 20 ಲೀಟರ್ ನೀರು ಸಿಗುತ್ತದೆ. ಈ ನೀರು ಶೇ.99ರಷ್ಟು ಶುದ್ಧವಾಗಿದ್ದು, ಯಾವುದೇ ರಾಸಾಯನಿಕಗಳನ್ನು ಹಾಕಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ವರ್ಷದ ಅಂತ್ಯದೊಳಗೆ ಹೈದರಾಬಾದ್ನಾದ್ಯಂತ ಇಂತಹ 200 ನೀರಿನ ಎಟಿಎಂಗಳು ಸ್ಥಾಪನೆಯಾಗಲಿವೆ ಎಂದು ಹೈದರಾಬಾದ್ ಮಹಾನಗರ ಪಾಲಿಕೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.