ಮುಂಬಯಿ: ಅಪ್ರಾಪ್ತ ಬಾಲಕಿಯರನ್ನು ಅರಬ್ ರಾಷ್ಟ್ರಗಳ ವಯಸ್ಸಾದ ಪುರುಷರಿಗೆ ಮಾರಾಟ ಮಾಡುವುದರ ವಿರುದ್ಧ ಹೈದಾರಾಬಾದ್ನಲ್ಲಿ ದೊಡ್ಡ ಅಭಿಯಾನವನ್ನು ನಡೆಸಲಾಗುತ್ತಿದೆ. ಇದೀಗ ಈ ಅಭಿಯಾನಕ್ಕೆ ಅಲ್ಲಿನ ಮಸೀದಿಗಳು ಕೂಡ ಕೈಜೋಡಿಸಿವೆ.
ಬಡ ಕುಟುಂಬಗಳಿಗೆ ಹಣದ ಆಮಿಷವೊಡ್ಡಿ ಅರಬ್ ರಾಷ್ಟ್ರಗಳ ಪುರುಷರು ಅಪ್ರಾಪ್ತೆಯರನ್ನು ಮದುವೆಯ ಹೆಸರಲ್ಲಿ ಖರೀದಿ ಮಾಡುತ್ತಾರೆ. ಬಳಿಕ ಅವರಿಗೆ ದೈಹಿಕ, ಮಾನಸಿಕ ಹಿಂಸೆಗಳನ್ನು ನೀಡುತ್ತಾರೆ. ಇಂತಹ ಹಲವಾರು ಘಟನೆಗಳು ಈಗಾಗಲೇ ಬೆಳಕಿಗೆ ಬಂದಿದೆ.
ಈ ಹಿನ್ನಲೆಯಲ್ಲಿ ಹೈದರಾಬಾದ್ ಜಿಲ್ಲಾಡಳಿತ ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದು, ಮಸೀದಿಗಳು ಇದರಲ್ಲಿ ಕೈಜೋಡಿಸಿವೆ.
ದಿನಕ್ಕೆ 5 ರಿಂದ 10 ನಿಮಿಷಗಳ ಕಾಲ ಬಾಲ್ಯ ವಿವಾಹ, ಅಪ್ರಾಪ್ತೆಯರ ಮಾರಾಟಗಳ ವಿರುದ್ಧ ಅರಿವು ಮೂಡಿಸುವ ಘೋಷಣೆಗಳನ್ನು ಮಸೀದಿಗಳು ನಿತ್ಯ ಮಾಡಲು ಮುಂದಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.