ನವದೆಹಲಿ: ಸರ್ಕಾರಕ್ಕೆ ಜನರ ಕಲ್ಯಾಣ, ನಾಗರಿಕರ ಸಂತೋಷ ಅತೀ ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ 200 ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೈಗಾರಿಕಾ ನಾಯಕರಾಗಿ ದೇಶದ ಅತೀ ಬಡವರಿಗೆ ಏನು ಮಾಡಬಹುದು ಎಂಬ ಬಗ್ಗೆ ಚಿಂತಿಸಿ ಎಂದು ಕರೆ ನೀಡಿದರು.
ಪ್ರತಿಯೊಬ್ಬರಿಗೂ ಈ ದೇಶ ನನ್ನದು, ಇದಕ್ಕಾಗಿ ನಾನು ದುಡಿಯಬೇಕು. ದೇಶದ ಪ್ರಗತಿಗಾಗಿ ಏನಾದರು ಮಾಡಬೇಕು ಎಂಬ ಭಾವನೆ ಇರಬೇಕು ಎಂದಿದ್ದಾರೆ.
ಅಭಿವೃದ್ಧಿ ಒಂದು ಜನಾಂದೋಲನವಾಗಿ ರೂಪುಗೊಳ್ಳಬೇಕು. 2022ರಲ್ಲಿ ನವ ಭಾರತದ ಸೃಷ್ಟಿಯನ್ನು ಟಾರ್ಗೆಟ್ ಆಗಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ಯುವ ಉದ್ಯಮಿಗಳು ಈ ದೇಶದ ಅಭಿವೃದ್ಧಿಯ ಯೋಧರಾಗಬೇಕು ಎಂದು ಅವರು ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.