ನವದೆಹಲಿ: ತನ್ನ ಆಳ ಸಮುದ್ರ ಬಂದರಿನ ಸಮೀಪದಲ್ಲಿ ನಿರ್ಮಿಸಿರುವ ಹ್ಯಾಂಬಂಟೊಟ ಏರ್ಪೋರ್ಟ್ನ್ನು ನಡೆಸುವ ಜವಾಬ್ದಾರಿಯನ್ನು ಶ್ರೀಲಂಕಾ ಭಾರತಕ್ಕೆ ವಹಿಸುವ ಸಾಧ್ಯತೆ ಇದೆ.
ಹ್ಯಾಂಬಂಟೊಟದಲ್ಲಿನ ಮಟ್ಟಲ ರಾಜಪಕ್ಷ ಇಂಟರ್ನ್ಯಾಷನಲ್ ಏರ್ಪೋರ್ಟ್ನ್ನು ಭಾರತೀಯ ಸಂಸ್ಥೆಗೆ ಹಸ್ತಾಂತರಿಸುವ ಪ್ರಸ್ತಾವಣೆಯನ್ನು ಶ್ರೀಲಂಕಾದ ಸಿವಿಲ್ ಆವಿಯೇಶನ್ ಸಚಿವಾಲಯ ಸಂಪುಟಕ್ಕೆ ಸಲ್ಲಿಸಿದೆ.
ಒಂದು ವೇಳೆ ಜಗತ್ತಿನ ಖಾಲಿ ಏರ್ಪೋರ್ಟ್ ಎಂದು ಕರೆಯಲ್ಪಡುವ ಈ ಏರ್ ಪೋರ್ಟ್ನ್ನು ನಡೆಸುವ ಜವಾಬ್ದಾರಿ ಭಾರತಕ್ಕೆ ಸಿಕ್ಕರೆ ಇದು ಚೀನಾ ಮತ್ತು ಭಾರತದ ನಡುವೆ ಸಮತೋಲವನ್ನು ಕಾಪಾಡುವ ಶ್ರೀಲಂಕಾದ ಧೋರಣೆಗೆ ಸಹಾಯಕವಾಗಲಿದೆ.
ಈ ಏರ್ಪೋರ್ಟ್ನ್ನು ನಿರ್ಮಿಸಿದ್ದು ಚೀನಾ ಸಹಾಯದಿಂದ. ಈಗಾಗಲೇ ಚೀನಾ ಶ್ರೀಲಂಕಾದಲ್ಲಿ ಸೀಪೋರ್ಟ್ನ್ನು ಹೊಂದಿದೆ.
ಚೀನಾ ಕೂಡ ಇದರ ನಿರ್ವಹಣೆಗೆ ಬಿಡ್ ಹಾಕಿದೆ. ಆದರೆ ಶ್ರೀಲಂಕಾ ಭಾರತದ ಪ್ರಸ್ತಾವಣೆಯನ್ನು ವಿಶೇಷವಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.