ನವದೆಹಲಿ: ಸುಮಾರು 10 ಲಕ್ಷ ತೆರಿಗೆದಾರರು ಹೊಸ ಜಿಎಸ್ಟಿಯಡಿ ತಮ್ಮ ರಿಟರ್ನ್ಸ್ ಫೈಲ್ ಮಾಡಿದ್ದಾರೆ. ಇದರಿಂದಾಗಿ ಕೇಂದ್ರದ ಬೊಕ್ಕಸಕ್ಕೆ ರೂ.42 ಸಾವಿರ ಕೋಟಿ ರೂಪಾಯಿ ಸಂದಾಯವಾಗಿದೆ.
ಒಟ್ಟು 10 ಲಕ್ಷ ತೆರಿಗೆದಾರರು ರಿಟರ್ನ್ಸ್ ಫೈಲ್ ಮಾಡಿದ್ದಾರೆ, 20 ಲಕ್ಷಕ್ಕೂ ಅಧಿಕ ಮಂದಿ ಫೈಲ್ ಮಾಡಲು ಲಾಗ್ ಇನ್ ಆಗಿದ್ದಾರೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಡೆಮೆರಿಟ್ ಗೂಡ್ಸ್ಗಳ ಸೆಸ್ನಿಂದ ಸುಮಾರು 5 ಸಾವಿರ ಕೋಟಿ ಸಂಗ್ರಹವಾಗಿದೆ ಎಂದಿದ್ದಾರೆ.
ಕೇಂದ್ರ ಮತ್ತು ರಾಜ್ಯಗಳ ಜಿಎಸ್ಟಿಯಡಿ 42 ಸಾವಿರ ಕೋಟಿ ರೂಪಾಯಿ ಬಂದಿದ್ದು, ಇದು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನಾಗಿ ಭಾಗವಾಗಲಿದೆ.
ಈ ವಾರದ ಅಂತ್ಯದಲ್ಲಿ ಫೈಲಿಂಗ್ ಕ್ಲೋಸ್ ಆಗಲಿದ್ದು, ಆ ವೇಳೆಗೆ ಸಂಗ್ರಹದ ಪ್ರಮಾಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.