ಚೆನ್ನೈ: ಮಾಜಿ ಸಿಎಂ ಜೆ.ಜಯಲಲಿತಾ ಅವರು ನಿಧನರಾದ ಬಳಿಕ ಒಡೆದು ಹೋಗಿದ್ದ ಎಐಎಡಿಎಂಕೆ ಪಕ್ಷ ಮತ್ತೆ ಒಂದಾಗಿದೆ. ತಮಿಳುನಾಡಿನ ಹಾಲಿ ಸಿಎಂ ಕೆ.ಪಳನಿಸ್ವಾಮಿ ನೇತೃತ್ವದ ಮತ್ತು ಓ.ಪನ್ನೀರಸೆಲ್ವಂ ನೇತೃತ್ವದ ಎಐಎಡಿಎಂಕೆ ಬಣಗಳು ಪರಸ್ಪರ ವಿಲೀನಗೊಂಡಿದೆ.
ಸೋಮವಾರ ಉಭಯ ಬಣಗಳು ಒಮ್ಮತಕ್ಕೆ ಬಂದು ವಿಲೀನವನ್ನು ಘೋಷಿಸಿವೆ.
ಓ.ಪನ್ನೀರಸೆಲ್ವ ಅವರಿಗೆ ಹಣಕಾಸು ಖಾತೆ ಮತ್ತು ಉಪ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ. ಪಳನಿಸ್ವಾಮಿ ಅವರು ಸಿಎಂ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.
ಜಯಾ ಸಾವಿನ ಬಳಿಕ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ, ಪ್ರಸ್ತುತ ಜೈಲಿನಲ್ಲಿರುವ ಶಶಿಕಲಾ ಅವರ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಲಾಗಿಲ್ಲ. ಪಕ್ಷದಿಂದ ಅವರನ್ನು ಕೈಬಿಡುವ ಸಾಧ್ಯತೆಗಳು ದಟ್ಟವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.