ನವದೆಹಲಿ: 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಇದುವರೆಗೆ ವಿದೇಶಗಳಲ್ಲಿದ್ದ ಒಟ್ಟು 24 ಭಾರತದ ಪ್ರಾಚೀನ ವಸ್ತುಗಳನ್ನು ವಾಪಾಸ್ ತಂದಿದೆ.
ಚೋಳರ ಕಾಲದ ಶ್ರೀದೇವಿಯ ಲೋಹದ ವಿಗ್ರಹ, ಮೌರ್ಯರ ಕಾಲದ ಟೆರಕೋಟಾ ಮಹಿಳಾ ವಿಗ್ರಹ, ಬಾಹುಬಲಿ ಮತ್ತು ನಟರಾಜ ಮೂರ್ತಿ ಸೇರಿದಂತೆ ಒಟ್ಟು 24 ಪ್ರಾಚೀನ ವಸ್ತುಗಳನ್ನು ವಾಪಾಸ್ ಭಾರತಕ್ಕೆ ತರಲಾಗಿದೆ.
16 ಪ್ರಾಚೀನ ವಿಗ್ರಹಗಳನ್ನು ಅಮೆರಿಕಾದಿಂದ, 5 ಆಸ್ಟ್ರೇಲಿಯಾದಿಂದ, ಕೆನಡಾ, ಜರ್ಮನಿ, ಸಿಂಗಾಪುರದಿಂದ ತಲಾ ಒಂದೊಂದು ಪ್ರಾಚೀನ ವಸ್ತುಗಳನ್ನು ವಾಪಾಸ್ ತರಲಾಗಿದೆ. ಈ ದೇಶಗಳು ಸ್ವಯಂಪ್ರೇರಿತವಾಗಿ ಇವುಗಳನ್ನು ಭಾರತಕ್ಕೆ ಒಪ್ಪಿಸಿವೆ.
ಆರ್ಟಿಐಯಡಿ ಕೇಳಲಾದ ಪ್ರಶ್ನೆಗೆ ಭಾರತದ ಪುರಾತತ್ವ ಸಮೀಕ್ಷೆ ಉತ್ತರವನ್ನು ನೀಡಿದ್ದು, ಇವುಗಳು ಭಾರತದಿಂದ ಹೇಗೆ ವಿದೇಶಕ್ಕೆ ಹೋದವು ಎಂಬ ಬಗ್ಗೆ ವಿವರಗಳನ್ನು ನೀಡಲಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.