ನವದೆಹಲಿ: ಕಂಪನಿಗಳಿಗೆ ಇನ್ಲ್ಯಾಂಡ್ ಕಂಟೇನರ್ ಡಿಪೋ, ಕಂಟೇನರ್ ಫ್ರೈಟ್ ಸ್ಟೇಶನ್, ಏರ್ ಫ್ರೈಟ್ ಸ್ಟೇಶನ್(ICD/CFS/AFS)ಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಸರಳಗೊಳಿಸಿದೆ.
ತ್ವರಿತ ಹಾಗೂ ಅತೀ ಪಾರದರ್ಶಕ ರೀತಿಯಲ್ಲಿ ಅನುಮೋದನಾ ಪ್ರಕ್ರಿಯೆಗಳು ನಡೆಯಲಿ ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಕಂಪನಿಗಳು ಇನ್ನು ಮುಂದೆ ಆನ್ಲೈನ್ ಮೂಲಕ ಅರ್ಜಿಗಳನ್ನು ಹಾಕಬಹುದಾಗಿದೆ. ಅಲ್ಲದೇ ಅರ್ಜಿಯ ಪ್ರಗತಿ, ಹಂತ ಹಂತದ ಅಪ್ಡೇಟ್ಗಳನ್ನು ಆಲ್ಲೈನ್ ಮೂಲಕವೇ ಪರಿಶೀಲಿಸಬಹುದಾಗಿದೆ. ಇದರಿಂದ ಸರ್ಕಾರಿ ಕಛೇರಿಗಳಿಗೆ ಅಲೆದಾಡುವ ಬವಣೆ ತಪ್ಪಲಿದೆ.
ಇನ್ಲ್ಯಾಂಡ್ ಕಂಟೇನರ್ ಡಿಪೋ, ಕಂಟೇನರ್ ಫ್ರೈಟ್ ಸ್ಟೇಶನ್, ಏರ್ ಫ್ರೈಟ್ ಸ್ಟೇಶನ್ಗಳ ಸ್ಥಾಪನೆಯ ಅನುಮೋದನಾ ಪ್ರಕ್ರಿಯೆ ವಿವಿಧ ಇಲಾಖೆಗಳನ್ನು ಒಳಗೊಂಡಿರುತ್ತದೆ, ಹೀಗಾಗೀ ರೈಲ್ವೇ, ವಾಣಿಜ್ಯ, ಹಣಕಾಸು, ರೈಲ್ವೇ, ಶಿಪ್ಪಿಂಗ್ ಸಚಿವಾಲಯಗಳ ಒಳಗೊಂಡ ಐಎಂಸಿ(ಇಮಟರ್ ಮಿನಿಸ್ಟ್ರಿಯಲ್ ಕಮಿಟಿ) ಮೂಲಕ ಅನುಮೋದನೆ ಪ್ರಕ್ರಿಯೆ ನಡೆಯುತ್ತದೆ. ಅಗತ್ಯಬಿದ್ದರೆ ಆಯಾ ರಾಜ್ಯಗಳ ಅಭಿಪ್ರಾಯವನ್ನೂ ಪಡೆಯಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.