ಪಾಟ್ನಾ: ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ಖಾದಿ ಉಡುಗೆಗಳನ್ನು ಧರಿಸುವಂತೆ ಸರ್ಕಾರಿ ಉದ್ಯೋಗಿಗಳಿಗೆ ಬಿಹಾರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಬಿಹಾರದ ಖಾದಿ ಮತ್ತು ಗ್ರಾಮೀಣ ಕೈಗಾರಿಕ ಮಂಡಳಿ ಈ ಮನವಿಯನ್ನು ಮಾಡಿಕೊಂಡಿದೆ.
ಸರ್ಕಾರಿ ಕಛೇರಿ, ಸರ್ಕಾರಿ ಗೆಸ್ಟ್ ಹೌಸ್, ಸರ್ಕ್ಯುಟ್ ಹೌಸ್ಗಳಲ್ಲಿ ಖಾದಿ ಅಥವಾ ಕೈಮಗ್ಗದ ಧಿರಿಸುಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.
ಐಎಎಸ್ ಅಧಿಕಾರಿಗಳು, ರಾಜ್ಯ ಸೇವಾ ಅಧಿಕಾರಿಗಳು, ಉದ್ಯೋಗಿಗಳು ಕಛೇರಿಗೆ ಕನಿಷ್ಠ ಪಕ್ಷ ವಾರಕ್ಕೆರಡು ಬಾರಿ ಖಾದಿ ಉಟ್ಟು ಬರಲಿ ಎಂದು ಬಯಸುತ್ತೇವೆ ಎಂದು ಮಂಡಳಿ ಮುಖ್ಯಸ್ಥರು ಹೇಳಿದ್ದಾರೆ.
ಮಹಾತ್ಮ ಗಾಂಧೀಯವರ ಸ್ವಾತಂತ್ರ್ಯ ಚಳುವಳಿಯಲ್ಲಿ ಸ್ವದೇಶಿ ಅಸ್ತ್ರವಾಗಿದ್ದ ಖಾದಿಯನ್ನು ಪ್ರಚಾರಪಡಿಸುವ ಸಲುವಾಗಿ ಅಭಿಯಾನವನ್ನು ಮಂಡಳಿ ಆರಂಭಿಸಿದೆ. ಇದೇ ವರ್ಷ ಬಿಹಾರ ಗಾಂಧಿಯ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವವನ್ನು ಆಚರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.