ನವದೆಹಲಿ: ಕೇಂದ್ರ ಸರ್ಕಾರದ ಮುದ್ರಾ ಸಾಲ ಯೋಜನೆಯ ಲಾಭವನ್ನು ಶೇ.78ರಷ್ಟು ಮಹಿಳೆಯರೇ ಪಡೆದುಕೊಂಡಿದ್ದಾರೆ. ಒಟ್ಟು 6.2 ಕೋಟಿ ಮಹಿಳೆಯರು ಮುದ್ರಾ ಸಾಲ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಯೋಜನೆಯಡಿ ರೂ.3, 55,590 ಕೋಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ರೂ.1,78,313 ಕೋಟಿ ಸಾಲವನ್ನು ಮಹಿಳೆಯರಿಗೆ ನೀಡಲಾಗಿದೆ. ಬೇಕರಿ, ಪೇಪರ್ ಉತ್ಪನ್ನ, ಫುಡ್ ಪಾರ್ಲರ್, ಹೇರ್ ಡ್ರೆಸಿಂಗ್, ಪಸರ್ನಲ್ ಕೇರ್ ಮುಂತಾದ ಸ್ವ ಉದ್ಯೋಗ, ವ್ಯವಹಾರ ನಡೆಸಲು ಮಹಿಳೆಯರು ಸಾಲವನ್ನು ಪಡೆದುಕೊಂಡಿದ್ದಾರೆ.
ಸಣ್ಣ ವ್ಯವಹಾರ ಮಾಡುತ್ತಿರುವವರಿಗೆ ಮುದ್ರಾ ಸಾಲ ಯೋಜನೆಯಿಂದ ಬಹಳಷ್ಟು ಸಹಕಾರಿಯಾಗಿದೆ. ಶೇ.23ರಷ್ಟು ಸಾಲವನ್ನು ಹಿಂದುಳಿದ ವರ್ಗದವರು ಪಡೆದುಕೊಂಡಿದ್ದರೆ, ಶೇ.10.5ರಷ್ಟು ಸಾಲ ಎಸ್ಸಿ ಮತ್ತು ಶೇ.3ರಷ್ಟು ಎಸ್ಟಿ ಜನಾಂಗದವರಿಗೆ ಸಿಕ್ಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.