ಬೆಂಗಳೂರಿನ ಕೆರೆಗಳು ರಾಸಾಯನಿಕಯುಕ್ತ ನೊರೆಗಳನ್ನು ಹೊರ ಚಿಮ್ಮಿಸುತ್ತಿದೆ. ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳಬೇಕಾದ ಸರ್ಕಾರ ಮಾತ್ರ ನಿದ್ರೆಯ ಮೂಡ್ನಿಂದ ಇನ್ನೂ ಹೊರಬಂದಿಲ್ಲ. ಆದರೆ ಶಾಲಾ ವಿದ್ಯಾರ್ಥಿಗಳ ತಂಡವೊಂದು ಕೆರೆಯ ಮಾಲಿನ್ಯ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
10ನೇ ತರಗತಿಯ ವಿಖ್ಯಾತ್ ಮಂಡ್ರೋತಿ ಮತ್ತು ಅವರ ತಂಡ ನ್ಯೂಯಾರ್ಕ್ ಅಕಾಡಮಿ ಆಯೋಜಿಸಿದ್ದ ಇನ್ನೋವೇಶನ್ ಚಾಲೆಂಜ್ನಲ್ಲಿ ಸ್ಪರ್ಧಿಸಿ ಜಯಗಳಿಸಿದೆ.
51 ದೇಶಗಳ 90 ತಂಡಗಳು ಇದರಲ್ಲಿ ಭಾಗವಹಿಸಿದ್ದವು.
ಬೆಂಗಳೂರಿನ ಕೆರೆಗಳ ದುರಾವಸ್ಥೆ ನೋಡಿ ಈ ಪ್ರಾಜೆಕ್ಟ್ನ್ನು ಕೈಗೆತ್ತಿಕೊಂಡೆವು ಎಂದು ವಿಖ್ಯಾತ್ ಹೇಳುತ್ತಾರೆ.
ಪ್ರ್ಯಾಕ್ಟಿಕಲ್ಗಳಾಗಿ ಡ್ರೋನ್ ಮತ್ತು ಸೆನ್ಸ್ರ ನೆಟ್ವರ್ಕ್ ಕಾಂಬಿನೇಶನ್ ಬಳಸಿ ಕೆರೆಗಳನ್ನು, ನೀರಿನ ಮೂಲಗಳನ್ನು ಮಾಲಿನ್ಯವಾಗದಂತೆ ಸದಾ ವೀಕ್ಷಣೆಯಲ್ಲಿಡುವ ಐಡಿಯಾವನ್ನು ಇವರು ನೀಡಿದ್ದಾರೆ.