ನವದೆಹಲಿ : 70 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ನಿರ್ವಾಹಕ ಬಿಎಸ್ಎನ್ಎಲ್ ರೋಮಿಂಗ್ ಸಂದರ್ಭದಲ್ಲೂ ವಾಯ್ಸ್, ಎಸ್ಎಂಎಸ್ ಮತ್ತು ವಿಶೇಷ ಟಾರಿಫ್, ಕಾಂಬೋ ವೋಚರ್ಸ್ ಬೆನಿಫಿಟ್ಗಳನ್ನು ನೀಡಲು ನಿರ್ಧರಿಸಿದೆ.
ಆಗಸ್ಟ್ 15 ರಿಂದಲೇ ಪ್ಯಾನ್ ಇಂಡಿಯಾ ಬೇಸಿಸ್ ಮೂಲಕ ಬಿಎಸ್ಎನ್ಎಲ್ ಆಪರೇಟ್ ಆಗುವ ಎಲ್ಲಾ ಪ್ರದೇಶಗಳಲ್ಲೂ ಈ ಬೆನಿಫಿಟ್ ಲಭ್ಯವಿರಲಿದೆ.
ಉಚಿತ ರಾಷ್ಟ್ರೀಯ ರೋಮಿಂಗ್ ಅನ್ನು ನೀಡಿದ ಮೊದಲ ಆಪರೇಟರ್ ಬಿಎಸ್ಎನ್ಎಲ್ ಆಗಿದ್ದು, 2015 ರಿಂದ ಇದು ಗ್ರಾಹಕರಿಗೆ ಲಭ್ಯವಾಗುತ್ತಿದೆ.
ಇದೀಗ ಅದು ನೀಡುತ್ತಿರುವ ಆಫರ್ ದೇಶದಾದ್ಯಂತ ನಿರಂತವಾಗಿ ಸಂಚರಿಸುವ ಯೋಧರಿಗೆ ಮತ್ತು ಪತ್ರಕರ್ತರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.
ಪ್ರಸ್ತುತ ನಾವು ಯಾವುದೇ ರಾಜ್ಯದಲ್ಲಿದ್ದರೂ ನಮ್ಮ ತವರು ರಾಜ್ಯ ಮತ್ತು ಲೈಸೆನ್ಸ್ ಏರಿಯಾ ಬೆನಿಫಿಟ್ಗಳು ನಮಗೆ ದೊರೆಯಲಿದೆ. ಆಗಸ್ಟ್ 15 ರಿಂದ ಹೊರ ರಾಜ್ಯಗಳಿಗೆ ಪ್ರಯಾಣಿಸಿದರೂ ಈ ಎಲ್ಲಾ ಬೆನಿಫಿಟ್ಗಳು ದೊರೆಯಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಸ್ಎನ್ಎಲ್ನ ನಿರ್ದೇಶಕ ಆರ್. ಕೆ. ಮಿತ್ತಲ್, ಸೇನಾಪಡೆಗಳ ಸಿಬ್ಬಂದಿಗಳು, ವೃತ್ತಿಪರರು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳು ನಮ್ಮ ಈ ಯೋಜನೆಯಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.