ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ರಾಜಕಾರಣಿಯೊಬ್ಬರು ಪಾಕಿಸ್ಥಾನ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಕಿಡಿಕಾರಿದ್ದಾರೆ. ಇಲ್ಲಿ ಮತ್ತು ಗಿಲ್ಗಿಟ್-ಬಲೋಚಿಸ್ತಾನದಲ್ಲಿ ನಡೆಸುತ್ತಿರುವ ಡ್ರಾಮವನ್ನು ಪಾಕಿಸ್ಥಾನ ನಿಲ್ಲಿಸಬೇಕು ಎಂದಿದ್ದಾರೆ.
ಪಿಓಕೆಯ ರಾಜಕಾರಣಿ ಮಿಸ್ಫರ್ ಖಾನ್ ಅವರು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಲೂಚಿಸ್ತಾನ ಪಾಕಿಸ್ಥಾನದ ಭಾಗವಲ್ಲ ಎಂದು ಹೇಳಿದ್ದಾರೆ.
‘ಪಾಕಿಸ್ಥಾನದ ರಾಜಕೀಯ ಪಕ್ಷಗಳು ಪಿಓಕೆ ಮತ್ತು ಗಿಲ್ಗಿಟ್-ಬಲೂಚಿಸ್ಥಾನದಲ್ಲಿ ಲೂಟಿ ಮಾಡುತ್ತಿವೆ, ದೌರ್ಜನ್ಯ ಎಸಗುತ್ತಿವೆ, ಇದು ತಕ್ಷಣವೇ ನಿಲ್ಲಬೇಕು’ ಎಂದಿದ್ದಾರೆ.
ಇನ್ನೊಬ್ಬ ಇಲ್ಲಿಯ ರಾಜಕೀಯ ಹೋರಾಟಗಾರ ತೈಫೂರ್ ಅಕ್ಬರ್ ಅವರೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಭಾಗದಲ್ಲಿ ವಾಸಿಸುತ್ತಿರುವ ಜನರನ್ನು ಜೀತದಾಳುಗಳ ತರಹ ನೋಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಪಾಕಿಸ್ಥಾನದ ಕ್ರೂರತೆಯನ್ನು ಬಯಲು ಮಾಡಿರುವ ಅವರು, ಇಲ್ಲಿನ ಜನರನ್ನು ದೇಶದ್ರೋಹದ ಹೆಸರಲ್ಲಿ ಪಾಕಿಸ್ಥಾನ ಜೈಲುಗಟ್ಟುತ್ತಿದೆ. ಇಲ್ಲಿ ರಸ್ತೆಯಿಲ್ಲ, ಫ್ಯಾಕ್ಟರುಗಳಿಲ್ಲ, ಪುಸ್ತಕಗಳನ್ನೂ ಬ್ಯಾನ್ ಮಾಡಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.