ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಭಾಷಣಕ್ಕೆ ಸಲಹೆಗಳನ್ನು ಕೊಡುವಂತೆ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಅದರಂತೆ ಅವರಿಗೆ ಸಲಹೆಗಳ ಸುರಿಮಳೆಯೇ ಹರಿದು ಬಂದಿದೆ.
ಮೋದಿಯವರು ಕೆಂಪುಕೋಟೆಯಲ್ಲಿನ ತಮ್ಮ ಭಾಷಣದಲ್ಲಿ ಯಾವೆಲ್ಲಾ ಅಂಶಗಳನ್ನು ಸೇರಿಸಬೇಕು ಎಂಬ ಬಗ್ಗೆ ಇದುವರೆಗೆ ಒಟ್ಟು 8 ಸಾವಿರ ಕಮೆಂಟ್, ಸಲಹೆಗಳು ಬಂದಿವೆ.
ಸಿಗರೇಟು ನಿಷೇಧದಿಂದ ಹಿಡಿದು ಶ್ರಾದ್ಧದ ವೇಳೆ ದೊಡ್ಡ ಸಮಾರಂಭ ಏರ್ಪಡಿಸುವುದನ್ನು ನಿರ್ಬಂಧಿಸುವವರೆಗೆ ಜನರು ಹತ್ತು ಹಲವು ಸಲಹೆ ನೀಡಿದ್ದಾರೆ.
ಆ.6ರವರೆಗೆ ನಮೋ ಆ್ಯಪ್ಗೆ 6 ಸಾವಿರ ಸಲಹೆಗಳು ಬಂದಿವೆ, MyGov.in ಗೆ 2,216 ಸಲಹೆಗಳು ಬಂದಿವೆ.
ಶಿಕ್ಷಣ ಗುಣಮಟ್ಟ, ಸ್ವಚ್ಛಭಾರತ, ಬೇಟಿ ಬಚಾವೋ-ಬೇಟಿ ಪಡಾವೋ, ಭ್ರಷ್ಟಾಚಾರ, ಡಿಜಟಲೀಕರಣ, ಪರಿಸರ ಹೀಗೆ ವಿವಿಧ ವಿಷಯಗಳ ಬಗ್ಗೆ ಸಲಹೆಗಳು ಬಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.