ನವದೆಹಲಿ: ಬಿಜೆಪಿ ಚಾಣಾಕ್ಯ ಅಮಿತ್ ಷಾ ಅವರು ರಾಜ್ಯಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಸಂಸದರಿಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ.
ಗುರುವಾರ ನವದೆಹಲಿಯಲ್ಲಿ ನಡೆದ ಪಕ್ಷದ ಸಂಸದೀಯ ಸಮಿತಿ ಸಭೆಯಲ್ಲಿ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಅಮಿತ್ ಷಾ ಅವರು ಬಂದಿದ್ದಾರೆ, ಇನ್ನು ನಿಮ್ಮ ವಿರಾಮದ ದಿನಗಳು ಮುಗಿಯಿತು’ ಎಂದಿದ್ದಾರೆ.
ಅಲ್ಲದೇ 2019ರ ಚುನಾವಣೆಯ ಸಂದರ್ಭದಲ್ಲಿ ನಿಮ್ಮ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಎಂಬ ಖಡಕ್ ಎಚ್ಚರಿಕೆಯನ್ನು ಗೈರಾಗುತ್ತಿರುವ ಸಂಸದರಿಗೆ ಅವರು ನೀಡಿದ್ದಾರೆ.
ಕಲಾಪಗಳಿಗೆ ನಿರಂತರ ಗೈರಾಗುವ ಸಂಸದರಿಗೆ ಕಟು ಎಚ್ಚರಿಕೆಯಾಗಿ ಈ ಮಾತುಗಳನ್ನು ಮೋದಿ ಸಂಸದರಿಗೆ ಹೇಳಿದ್ದಾರೆ. ಅಲ್ಲದೇ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಸದಾ ಹಾಜರಿರುವಂತೆ ಷಾ ಮಾಡಲಿದ್ದಾರೆ ಎಂಬುದಾಗಿಯೂ ಮೋದಿ ಹೇಳಿದ್ದಾರೆ ಎನ್ನಲಾಗಿದೆ.
‘ಹಲವಾರು ಬಾರಿ ಸಂಸತ್ತಿನಲ್ಲಿ ಹಾಜರಿರುವಂತೆ ಹೇಳಿದ್ದೇವೆ. ಆದರೂ ಕೆಲವು ಸಂಸದರು ಗೈರಾಗುತ್ತಿದ್ದಾರೆ. ನಿಮ್ಮ ಬಗ್ಗೆ ನೀವು ಏನಂದುಕೊಂಡಿದ್ದೀರಿ? ನೀವು ಯಾರೂ ಅಲ್ಲ, ನಾನೂ ಯಾರೂ ಅಲ್ಲ, ಬಿಜೆಪಿಯೇ ಪ್ರಮುಖವಾದುದು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.