ಲಂಡನ್ : ಲಂಡನ್ನ ಫುಟ್ಬಾಲ್ ಆಟಗಾರ ಥಿಯೋ ವಾಲ್ಕಟ್ ‘ಓಂ ನಮಃ ಶಿವಾಯ’ ಎಂಬುದಾಗಿ ಟ್ಯಾಟೂ ಬರೆಸಿಕೊಂಡಿದ್ದಾರೆ. ಆ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಇದೀಗ ಭಾರೀ ಗಮನ ಸೆಳೆದಿದೆ.
ಶಿವನ ಪಂಚಾಕ್ಷರೀ ಮಂತ್ರವಾದ ‘ಓಂ ನಮಃ ಶಿವಾಯ’ ಮಂತ್ರವನ್ನು ತಮ್ಮ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ಥಿಯೋ ವಾಲ್ಕಟ್ ಈ ಮೂಲಕ ಶಿವನಿಗೆ ಗೌರವ ಅರ್ಪಿಸಿದ್ದಾರೆ.
ಭಾರತೀಯ ಸಂಸ್ಕೃತಿ, ಆಚಾರ ವಿಚಾರ, ವೇದಗಳಿಗೆ ಮೊರೆ ಹೋದ ಪಾಶ್ಚಿಮಾತ್ಯರಲ್ಲಿ ಲಂಡನ್ನ ಫುಟ್ಬಾಲ್ ಆಟಗಾರ ಥಿಯೊ ವಾಲ್ಕಟ್ ಅವರೂ ಒಬ್ಬರು.
ಈ ಮೊದಲು ತಮ್ಮ ಬಲಗೈ ಮೇಲೆ ಟ್ಯಾಟೂ ಅನ್ನು ಸಂಸ್ಕೃತದಲ್ಲಿ ಬರೆಸಿಕೊಂಡಿದ್ದರು. ಇದೀಗ ತಮ್ಮ ಬೆನ್ನಿನ ಮೇಲೆ ಶಕ್ತಿಯುತ ಮಂತ್ರವಾಗಿರುವ ‘ಓಂ ನಮಃ ಶಿವಾಯ’ ಮಂತ್ರವನ್ನು ಬರೆಸಿಕೊಂಡಿರುವುದು ಹಲವರ ಮೆಚ್ಚುಗೆ ಕಾರಣವಾಗಿದೆ.
ಟ್ವಿಟರ್ನಲ್ಲಿ ತಮ್ಮ ಚಿತ್ರವನ್ನು ಹಂಚಿಕೊಂಡಿರುವ ಥಿಯೋ ವಾಲ್ಕಟ್, ‘ನಿಮ್ಮ ಹೃದಯವನ್ನು ತೆರೆಯಿರಿ, ಭಯ, ದೇಷ ಮತ್ತು ಅಸೂಯೆಯನ್ನು ತ್ಯಜಿಸಿ, ಶಾಶ್ವತ ಆನಂದ ಮತ್ತು ಸಂತೋಷವನ್ನು ಹೊಂದಿರಿ’ ಎಂಬ ವಾಕ್ಯಗಳೊಂದಿಗೆ ಟ್ವೀಟ್ ಮಾಡಿದ್ದಾರೆ.
Open your heart, shed fear, hate or envy, to experience everlasting joy & happiness #NewTattoo pic.twitter.com/R0Qksj4vk5
— Theo Walcott (@theowalcott) August 9, 2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.