ನವದೆಹಲಿ: ನಮಾಮಿ ಗಂಗೆ ಯೋಜನೆಯಡಿ ಬಿಹಾರ, ಪಶ್ಚಿಮಬಂಗಾಳ, ಉತ್ತರಪ್ರದೇಶಗಳಲ್ಲಿ ರೂ.2,033 ಕೊಟಿ ಮೊತ್ತದ ಒಟ್ಟು 10 ಯೋಜನೆ ಹಮ್ಮಿಕೊಳ್ಳಲು ಅನುಮೋದನೆ ನೀಡಲಾಗಿದೆ.
10 ಯೋಜನೆಗಳ ಪೈಕಿ 8 ಯೋಜನೆಗಳು ಒಳಚರಂಡಿ ಮೂಲಸೌಕರ್ಯ ಮತ್ತು ನಿರ್ವಹಣೆಯದ್ದಾಗಿದ್ದು, ಒಂದು ಯೋಜನೆ ನದಿ ಅಭಿವೃದ್ಧಿಯಾಗಿದೆ. ಒಂದು ಯೋಜನೆ ಗಂಗಾ ಜ್ಞಾನ ಕೇಂದ್ರ ಸ್ಥಾಪನೆ.
ಗಂಗಾ ಶುದ್ಧೀಕರಣದ ಕಾರ್ಯನಿರ್ವಾಹಕ ಸಮಿತಿಯ 5ನೇ ಸಭೆಯಲ್ಲಿ ಈ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಬಿಹಾರಕ್ಕೆ ರೂ.1461 ಕೋಟಿ, ಪಶ್ಚಿಮ ಬಂಗಾಳಕ್ಕೆ ರೂ.495.47 ಕೋಟಿ, ಉತ್ತರಪ್ರದೇಶಕ್ಕೆ ರೂ.27.98 ಕೋಟಿ ಯೋಜನೆಯಡಿ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.