ಮುಂಬಯಿ: ಜಿಎಸ್ಟಿಯಿಂದಾಗಿ ಮುಂದಿನ ಆರು ತಿಂಗಳಲ್ಲಿ ಜಿಡಿಪಿಯಲ್ಲಿ ಗಣನೀಯ ಏರಿಕೆಯಾಗಲಿದೆ ಎಂಬ ಅಭಿಪ್ರಾಯವನ್ನು ಖ್ಯಾತ ಉದ್ಯಮಿ ಆದಿ ಗೋದ್ರೆಜ್ ಅವರು ವ್ಯಕ್ತಪಡಿಸಿದ್ದಾರೆ.
‘ಜಿಎಸ್ಟಿ ನಮ್ಮ ಜಿಡಿಪಿ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಲಿದೆ. ಆದರೆ ಜಿಎಸ್ಟಿ ಕೆಲವೊಂದು ಪ್ರಾಥಮಿಕ ಸಮಸ್ಯೆಗಳನ್ನು ಒಳಗೊಂಡಿದ್ದು, ಇವುಗಳು ಪರಿಹಾರವಾಗುವ ನಿರೀಕ್ಷೆ ನನಗಿದೆ’ ಎಂದಿದ್ದಾರೆ.
ವಿವಿಧ ಮಟ್ಟದ ಆದಾಯಗಳನ್ನು ಹೊಂದಿರುವ ಜನರಿರುವ ಭಾರತದಂತಹ ದೇಶದಲ್ಲಿ ಜನರು ಒಂದು ಅಥವಾ ಎರಡು ದರಗಳನ್ನು ನಿರೀಕ್ಷೆ ಮಾಡುವುದು ಅವಾಸ್ತವಿಕ ಎಂದಿರುವ ಅವರು, ಈ ಜಿಎಸ್ಟಿಯು ಜಿಎಸ್ಟಿ ಪರಿಚಯದ ದುರ್ಬಲ ರೂಪವಲ್ಲ ಎಂದು ತಾನು ಪರಿಗಣಿಸುವುದಿಲ್ಲ ಎಂದಿದ್ದಾರೆ.
ಜಿಎಸ್ಟಿಯನ್ನು ಅತ್ಯಂತ ಕಾಳಜಿಯುತವಾಗಿ ಪರಿಚಯಿಸಲಾಗಿದೆ, ಸರಿಯಾದ ದರಗಳನ್ನು ಫಿಕ್ಸ್ ಮಾಡಲಾಗಿದೆ. ಬಹಳಷ್ಟು ಸಾಮಾನ್ಯ ಗ್ರಾಹಕ ವಸ್ತುಗಳ ತೆರಿಗೆ ದರ ಈಗ ಕಡಿಮೆಯಾಗಿದೆ, ಇದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.