ನವದೆಹಲಿ: ಹಲವಾರು ಪ್ಯಾನ್ಕಾರ್ಡ್ ಹೊಂದಿ ತೆರಿಗೆ ವಂಚನೆ ಮಾಡುವ ವಂಚಕರನ್ನು ಸದೆ ಬಡಿಯುವುದಕ್ಕಾಗಿ ಕೇಂದ್ರ ಸರ್ಕಾರ ಸುಮಾರು 11.44 ಲಕ್ಷ ಪ್ಯಾನ್ಕಾರ್ಡ್ಗಳನ್ನು ಜುಲೈ 27ರವರೆಗೆ ನಿಷ್ಕ್ರೀಯಗೊಳಿಸಿದೆ.
ಆಧಾರ್ ಸಂಖ್ಯೆಯನ್ನು ಪ್ಯಾನ್ಕಾರ್ಡ್ ನೊಂದಿಗೆ ಲಿಂಕ್ ಮಾಡಬೇಕೆಂದು ಸರ್ಕಾರ ಆದೇಶ ಹೊರಡಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಜುಲೈ 1ರಿಂದ ಪ್ಯಾನ್ಕಾರ್ಡ್ ಪಡೆಯಲು ಆಧಾರ್ನ್ನು ಕಡ್ಡಾಯಗೊಳಿಸಿದೆ.
ಒಬ್ಬ ವ್ಯಕ್ತಿಗೆ ಒಂದು ಪ್ಯಾನ್ಕಾರ್ಡ್ ಹೊಂದುವ ಅವಕಾಶ ಮಾತ್ರ ಇದೆ.
ಇದೀಗ ಸಾರ್ವಜನಿಕರು ತಮ್ಮ ಪ್ಯಾನ್ಕಾರ್ಡ್ ನಿಷ್ಕ್ರೀಯವಾಗಿದೆಯೇ ಅಥವಾ ಕ್ರಿಯಾಶೀಲವಾಗಿದೆಯೇ ಎಂಬುದನ್ನು ನೋಡಲು ಆದಾಯ ತೆರಿಗೆ ವೆಬ್ಸೈಟ್ https://incometaxindiaefiling.gov.in ಗೆ ಲಾಗ್ ಇನ್ ಆಗಬೇಕು. ಹೋಂ ಪೇಜ್ನಲ್ಲಿನ “Know Your PAN” optionಗೆ ಕ್ಲಿಕ್ ಮಾಡಿ ಅಲ್ಲಿ ಸರ್ನೇಮ್, ಫಸ್ಟ್ ನೇಮ್, ಪ್ಯಾನ್ ಸ್ಟೇಟಸ್, ಜೆಂಡರ್, ಜನ್ಮದಿನಾಂಕ, ಪ್ಯಾನ್ಕಾರ್ಡ್ಗೆ ರಿಜಿಸ್ಟರ್ ಆದ ಮೊಬೈಲ್ ನಂಬರ್ ಎಂಟರ್ ಮಾಡಬೇಕು.
ಮಾಹಿತಿ ತುಂಬಿದ ಬಳಿಕ ‘Submit’ optionಗೆ ಕ್ಲಿಕ್ ಮಾಡಬೇಕು. ಬಳಿಕ ಮೊಬೈಲ್ ನಂಬರ್ಗೆ ಓಟಿಪಿ ಬರುತ್ತದೆ. ಅದನ್ನು ಅಲ್ಲಿ ಹಾಕಬೇಕು. ನೀವು ನೀಡಿದ ಮಾಹಿತಿಯಲ್ಲಿ ಹೆಚ್ಚಿನ ಪ್ಯಾನ್ನಂಬರ್ ರಿಜಿಸ್ಟರ್ ಆಗಿದ್ದರೆ ಹೆಚ್ಚುವರಿ ಮಾಹಿತಿ ಕೇಳಿ ಹೆಚ್ಚಿನ ಪಾಪ್ಅಪ್ಗಳು ಬರುತ್ತವೆ. ನಿಮ್ಮ ಪ್ಯಾನ್ಕಾಡ್ ವ್ಯಾಲಿಡ್ ಆಗಿದ್ದರೆ ಅಲ್ಲಿ ’ಆ್ಯಕ್ಟಿವ್’ ಎಂದು ತೋರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.